ನಾಪತ್ತೆಯಾದ ಯುಡಿಎಫ್ ಅಭ್ಯರ್ಥಿ ಯುವಕನೊಂದಿಗೆ ಪೊಲೀಸ್ ಠಾಣೆಯಲ್ಲಿ ಹಾಜರು

ಕಣ್ಣೂರು:  ಚೋಕ್ಲಿಯಿಂದ ನಾಪತ್ತೆಯಾದ ಯುಡಿಎಫ್ ಅಭ್ಯರ್ಥಿ ಟಿ.ಪಿ. ಅರುವ ಮರಳಿ ಬಂದಿದ್ದಾರೆ. ಚೊಕ್ಲಿ ಪೊಲೀಸ್ ಠಾಣೆಯಲ್ಲಿ ಅರುವ ಹಾಗೂ ಯುವಕ ಹಾಜರಾಗಿದ್ದಾರೆ.  ಚೊಕ್ಲಿ ಗ್ರಾಮ ಪಂಚಾಯತ್‌ನ ೯ನೇ ವಾರ್ಡ್‌ನಲ್ಲಿ ಮುಸ್ಲಿಂ ಲೀಗ್‌ನ  ಯುಡಿಎಫ್ ಅಭ್ಯರ್ಥಿಯಾಗಿ ಅರುವ ಸ್ಪರ್ಧಿಸುತ್ತಿ ದ್ದಾರೆ.  ಶನಿವಾರ ಬೆಳಿಗ್ಗೆ ಮನೆಯಿಂದ ಹೊರಗೆ ಹೋದ ಅರುವ ಬಳಿಕ ನಾಪತ್ತೆಯಾಗಿದ್ದರು. ಮನೆಯವರು ಮೊಬೈಲ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ  ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾಯಿ ಚೊಕ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.  ಸ್ಥಳೀಯನಾದ ಓರ್ವ ಬಿಜೆಪಿ ಕಾರ್ಯಕರ್ತನೊಂದಿಗೆ  ಟಿ.ಪಿ. ಅರುವ  ತೆರಳಿರುವುದಾಗಿ   ತಾಯಿ ಆರೋಪಿಸಿದ್ದು, ಇದರಂತೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದರು.  ಈ ಮಧ್ಯೆ ನಿನ್ನೆ ಸಂಜೆ  ಅರುವ ಹಾಗೂ ಯುವಕ ಠಾಣೆಯಲ್ಲಿ ಹಾಜರಾಗಿದ್ದಾರೆ. ಅವರಿಬ್ಬರನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.  ಇದೇ ವೇಳೆ ಅಭ್ಯರ್ಥಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಯುಡಿಎಫ್ ಕಾರ್ಯ ಕರ್ತರು ಆತಂಕಕ್ಕೀಡಾಗಿದ್ದರು.  ನಾಳೆ ಚುನಾವಣೆ ನಡೆಯಲಿರುವಂತೆಯೇ ಅಭ್ಯರ್ಥಿ ನಾಪತ್ತೆಯಾಗಿರುವುದರಿಂದ ಯುಡಿಎಫ್‌ನ ಪ್ರಚಾರ ಸಂದಿಗ್ಧತೆಯಲ್ಲಾಗಿತ್ತು. ನಿನ್ನೆ ಸಂಜೆ ಅಬ್ಬರದ ಪ್ರಚಾರ ಸಮಾಪ್ತಿ ವೇಳೆಯೂ ಅಭ್ಯರ್ಥಿ ತಲುಪಿರಲಿಲ್ಲ. 

RELATED NEWS

You cannot copy contents of this page