ನಾಪತ್ತೆಯಾಗಿದ್ದ ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ನಾಪತ್ತೆಯಾಗಿದ್ದ ಯುವಕ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಕುಳದಪಾರೆ ನಾಕೂರು ಎಂಬಲ್ಲಿನ ಕೊರಗಪ್ಪ ಎಂಬವರ ಪುತ್ರ ಸುನಿಲ್ (23) ಮೃತಪಟ್ಟ ಯುವಕ.

 ಕೂಲಿ ಕಾರ್ಮಿಕನಾಗಿದ್ದ ಸುನಿಲ್  ಬುಧವಾರ ಅಪರಾಹ್ನ ೩ ಗಂಟೆಗೆ ಮನೆಯಿಂದ ಹೊರಗೆ ತೆರಳಿದ್ದನು. ಅನಂತರ ಮನೆಗೆ ಬಂದಿರಲಿಲ್ಲ. ಈಬಗ್ಗೆ  ನಿನ್ನೆ ಮನೆಯವರು ಆದೂರು ಪೊಲೀಸರಿಗೆ ದೂರು ನೀಡಿದ್ದರು. ಅನಂತರ ಮನೆಯವರು ನಡೆಸಿದ ಶೋಧ ವೇಳೆ ಮನೆ ಸಮೀಪದ ರಬ್ಬರ್ ತೋಟದಲ್ಲಿ ಸುನಿಲ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು ಬಳಿಕ ಮನೆ ಹಿತ್ತಿಲಲ್ಲಿ  ಅಂತ್ಯಸಂಸ್ಕಾರ ನಡೆಸ ಲಾಯಿತು. ಮೃತನು ತಂದೆ, ತಾಯಿ ಲಲಿತ, ಪತ್ನಿ ದೀಕ್ಷಿತ, ಪುತ್ರಿ ಋತಿಕ ಸಹೋದರಿ ಶ್ವೇತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

RELATED NEWS

You cannot copy contents of this page