ಕಣ್ಣೂರು: ಕಣ್ಣೂರು ಸೆಂಟ್ರಲ್ ಜೈಲಿನೊಳಗೆ ಮೊಬೈಲ್ ಪೋನ್ ಬಾಟ್ಲಿಂiiಲ್ಲಿ ತುಂಬಿಸಿ ಹೂತು ಹಾಕಿರುವುದು ಪತ್ತೆಯಾಗಿದೆ.ಐದನೇ ಬ್ಲಾಕ್‌ನಲ್ಲಿ ನೂತನ ಶೌಚಾಲಯ ಸಮೀಪ ಹೊಂಡತೋಡಿ ಮೊಬೈಲ್ ಫೋನ್ ಹೂತು ಹಾಕಲಾಗಿತ್ತು. ಇದರ ಹೊರತು ಬಾಟ್ಲಿಯೊಳಗೆ ಪವರ್ ಬ್ಯಾಂಕ್, ಸಿಮ್ ಕಾರ್ಡ್, ಚಾರ್ಜಿಂಗ್ ವಯರ್, ಹೆಡ್‌ಸೆಟ್ ಮೊದಲಾದವುಗಳು ಪತ್ತೆಯಾಗಿದೆ. ಜೈಲು ನೌಕರರು ನಡೆಸಿದ ತಪಾಸಣೆಯಲ್ಲಿ ಇವು ಪತ್ತೆಯಾಗಿವೆ.ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಮೊಬೈಲ್ ಪೋನ್, ಮಾದಕ ವಸ್ತುಗಳು, ಇಲೆಕ್ಟ್ರಾನಿಕ್ ಉಪಕರಣ ಗಳನ್ನು ಈ ಹಿಂದೆಯೂ ಪತ್ತೆಹಚ್ಚಲಾಗಿತ್ತು. ಇತ್ತೀಚೆಗಷ್ಟೇ ಜೈಲಿನ ಗೋಡೆಯ ಮೇಲೇರಿ ಮಾದಕವಸ್ತು ಗಳನ್ನು ಜೈಲಿನೊಳಗೆ ಎಸೆಯುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದರು. ಜೈಲಿನಲ್ಲಿರುವ ಖೈದಿಗಳಿಗೆ ಮೊಬೈಲ್ ಸಹಿತ ವಿವಿಧ ವಸ್ತುಗಳನ್ನು ಪೂರೈಸುತ್ತಿದ್ದ ಓರ್ವನನ್ನು ಕಳೆದ ವರ್ಷ ಸೆರೆಹಿಡಿಯಲಾಗಿತ್ತು. ಖೈದಿಗಳು ಆಗ್ರಹಪಡುವ ವಸ್ತುಗಳನ್ನು ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲೇ ಇರುವ ಜೈಲಿನ ಗೋಡೆ ಮೂಲಕ ಎಸೆ ಯಲಾ ಗುತ್ತಿದೆ. ಮೊದಲು ಕಲ್ಲೆಸೆದು ಸೂಚನೆ ನೀಡಲಾ ಗುತ್ತಿದೆ. ಬಳಿಕ ಮೊಬೈಲ್ ಫೋನ್, ಮಾದಕ ವಸ್ತುಗಳು ಮೊದ ಲಾದವುಗಳನ್ನು ಎಸೆದು ಖೈದಿಗಳ ಕೈಗೆ ಸಿಗುವಂತೆ ಮಾಡಲಾಗುತ್ತಿದೆಯೆಂದು ಬಂಧಿತ ವ್ಯಕ್ತಿ ಬಹಿರಂಗ ಪಡಿಸಿದ್ದನು. ಹೀಗೆ ಖೈದಿಗಳಿಗೆ ವಿವಿಧ ವಸ್ತು ದೊರಕಿಸಿ ದರೆ ೧೦೦೦ದಿಂದ ೨೦೦೦ ರೂ. ವರೆಗೆ ಪ್ರತಿಫ ಲವೂ ಲಭಿಸುತ್ತಿದೆಯೆಂದೂ ಆತ ಬಹಿರಂಪಡಿಸಿದ್ದನು. ಇದೀಗ ಮೊಬೈಲ್ ಫೋನ್ ಹೂತು ಹಾಕಿದ ಸ್ಥಿತಿಯಲ್ಲಿ ಪತ್ತೆ ಯಾಗಿರುವ ಬಗ್ಗೆ ಪೊಲೀಸರು ತನಿಖ ಆರಂಭಿಸಿದ್ದಾರೆ.





