ಮಧೂರು: ಮೊಗೇರ ಸರ್ವೀಸ್ ಸೊಸೈಟಿಯ ರಾಜ್ಯಸಮಿತಿ, ಜಿಲ್ಲಾ ಸಮಿತಿಗಳ ಜಂಟಿ ಆಶ್ರಯದಲ್ಲಿ ಉಳಿಯತ್ತಡ್ಕದಲ್ಲಿ ಮೊಗೇರ ಆಟಿದ ಕೂಟ ಜರಗಿತು. ಮೊಗೇರ ಸರ್ವೀಸ್ ಸೊಸೈಟಿಯ ಮುಖಂಡರು, ಸಮುದಾಯದ ಹಿರಿಯರು ಮೂಲಸ್ಥಾನ ಪರಿಸರದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಅಟಲ್‌ಜಿ ಸಭಾಂಗಣ ದಲ್ಲಿ ಕಾರ್ಯಕ್ರಮ ಆರಂಭಗೊಂಡಿತು. ಸಂಘಟನೆಯ ಅಧ್ಯಕ್ಷ ಚಂದ್ರ ಸಿ.ಬಿ. ಅಡೂರು ಅಧ್ಯಕ್ಷತೆ ವಹಿಸಿದ್ದು, ಮಧೂರು ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ ಉದ್ಘಾಟಿಸಿದರು. ಮಧೂರು ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಗಟ್ಟಿ ಮಾತನಾಡಿದರು.
ರಾಜ್ಯ ಮೊಗೇರ ಸರ್ವೀಸ್ ಸೊಸೈಟಿ ಅಧ್ಯಕ್ಷ ಐ ಲಕ್ಷ್ಮಣ ಪೆರಿಯಡ್ಕ, ಪ್ರಾಧ್ಯಾಪಿಕೆ ಡಾ. ಆಶಾಲತಾ ಚೇವಾರ್ ಮಾತನಾಡಿದರು. ಕರ್ನಾಟಕ ಮೊಗೇರ ಸಂಘದ ಅಧ್ಯಕ್ಷ ನಂದಿರಾಜ ಸಂಕೇಶ ವಿಚಾರಗೋಷ್ಠಿ ನಡೆಸಿಕೊಟ್ಟರು.