ಮೊನಾಲಿಸ ಅಪ್ರಾಪ್ತೆ: ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸು

ತಿರುವನಂತಪುರ: ಕುಂಭ ಮೇಳಕ್ಕೆ ಸಂಬಂಧಿಸಿ ದೇಶದೆಲ್ಲೆಡೆ ಗಮನ ಸೆಳೆದು ಕೊನೆಗೆ ತಿರುವನಂತಪುರಕ್ಕೆ ತಲುಪಿ ಸಿಪಿಎಂ, ಪೋಪ್ಯುಲರ್ ಫ್ರಂಟ್ ಮುಖಂಡರ ಸಹಾಯದಲ್ಲಿ ವಿವಾಹವಾದ ಮೊನಾಲಿಸಳಿಗೆ ಪ್ರಾಯಪೂರ್ತಿಯಾಗಿಲ್ಲವೆಂದು ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯ ವಿವಾಹ ನಡೆಸಿದವರ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ.

2009 ದಶಂಬರ್ 30ರಂದು ಮೊನಾಲಿಸ ಜನಿಸಿರುವುದಾಗಿ ಪತ್ತೆಹಚ್ಚಲಾಗಿದೆ. ಪೋಕ್ಸೋ, ಭಾರತೀಯ ನ್ಯಾಯಸಂಹಿತೆ, ಪರಿಶಿಷ್ಟ ಜಾತಿಯವರ ವಿರುದ್ಧ ಅಕ್ರಮ ತಡೆಯುವ ಕಾಯ್ದೆ ಎಂಬಿವು ಪ್ರಕಾರ ಕೇಸು ದಾಖಲಿಸಲಾಗಿದೆ. ಫರ್ದಿ ವನವಾಸಿ ಸಮಾಜಕ್ಕೊಳಪಟ್ಟ ಮೊನಾಲಿಸ ಬೋಸ್ಲೆಗೆ 18 ವರ್ಷ ಪೂರ್ತಿಯಾಗಿದೆ ಎಂದು ತಿಳಿಸಿ ಮಧ್ಯಪ್ರದೇಶದಿಂದ ಕೇರಳಕ್ಕೆ ಕರೆತಂದು ವಿವಾಹ ನಡೆಸಿಕೊಡ ಲಾಗಿತ್ತು. ರಾಷ್ಟ್ರೀಯ ಪರಿಶಿಷ್ಟ ಜಾತಿ ಪಂಗಡ ಆಯೋಗದ ಅಧ್ಯಕ್ಷ ಅಂತರ್ ಸಿಂಗ್ ಆರ್ಯರವರ ನೇತೃತ್ವದಲ್ಲಿ ಖ್ಯಾತ ನ್ಯಾಯವಾದಿ ಪ್ರಾತಮ್ ಧುಬೈ ಅವರ ಸಹಾಯದೊಂದಿಗೆ ತನಿಖೆ ನಡೆಸಿ ಮೊನಾಲಿಸ ಮೈನರ್ ಎಂದು ಪತ್ತೆಹಚ್ಚಲಾಗಿತ್ತು. ಬಳಿಕ ಆಯೋಗದ ನಿರ್ದೇಶ ಪ್ರಕಾರ ಪೊಲೀಸರು ಈಕೆಯನ್ನು ವಿವಾಹವಾದ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸು ದಾಖಲಿಸಿದ್ದಾರೆ. ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಲಭ್ಯಗೊಳಿಸುವುದಾಗಿ ತಿಳಿಸಿ ಪ್ರಾಯಪೂರ್ತಿಯಾಗದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ವಿವಾಹ ನಡೆಸಲಾಗಿದೆ ಎಂದು ಕೇಸು ದಾಖಲಿಸಲಾಗಿದೆ.

RELATED NEWS

You cannot copy contents of this page