ನಗರಸಭೆಯ ಮೊದಲ ಮಹಿಳಾ ಕೌನ್ಸಿಲರ್ ನಿಧನ

ಕಾಸರಗೋಡು: ನಗರಸಭಾ ಮಾಜಿ ಕೌನ್ಸಿಲರ್, ನೆಲ್ಲಿಕುಂಜೆ ನಿವಾಸಿ ದಿ| ಗಣೇಶ್‌ಅಬ್ದುಲ್ಲಕುಂಞಿಯವರ ಪತ್ನಿ ಸೌದಾಬಿ ಅಬ್ದುಲ್ಲಕುಂಞಿ (84) ನಿಧನ ಹೊಂದಿದರು.  ನೆಲ್ಲಿಕುಂಜೆ ವಾರ್ಡನ್ನು ಪ್ರತಿನಿಧೀಕರಿಸಿ ನಗರಸಭೆಗೆ ತಲುಪಿದ ಮೊದಲ ಮಹಿಳಾ ಸದಸ್ಯೆಯಾಗಿದ್ದರು. ಮೃತರು ಮಕ್ಕಳಾದ ರಹೀಂ, ಸಾದಿಕ್, ನಸೀರ್, ಸಾಹಿರ, ಖದೀಜ, ಸಮೀರ, ಸಲ್ಮಾ, ಅಳಿಯಂದಿರಾದ ಮೊಹಮ್ಮದ್ ಕುಂಞಿ, ಬಶೀರ್ ಸೂಫಿ ತಳಂಗರೆ, ಅಬ್ದುಲ್ಲ ಕುಂಞಿ ಚೆರ್ಕಳ, ಅಬ್ದುಲ್ಲ ಕುಂಞಿ ಮೊಗ್ರಾಲ್, ಸೊಸೆಯಂದಿರಾದ ಸೌದಾ, ನಬೀಸ, ಮರಿಯಾಂಬಿ, ಫೌಸಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಬಶೀರ್ ಈ ಹಿಂದೆ ನಿಧನಹೊಂದಿದ್ದಾರೆ.

You cannot copy contents of this page