ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜತ್ತೂರಿನಲ್ಲಿ ಪುತ್ರಿ ಹಾಗೂ ಪತ್ನಿಯ ಸಹೋದರಿಯ ಪತಿಯನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಆರೋಪಿ ಉಮ್ಮರ್ ಫಾರೂಕ್‌ನನ್ನು ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಲಾಗಿದ್ದು, ಆತನನ್ನು ಘಟನೆ ನಡೆದ ಸ್ಥಳಕ್ಕೆ ತಂದು ಹೇಳಿಕೆ ಸಂಗ್ರಹ ಪೂರ್ತಿಗೊಂಡಿತು. ಇಂದು ಮಧ್ಯಾಹ್ನ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುವುದೆಂದು ತನಿಖಾ ಅಧಿಕಾರಿ ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ತಿಳಿಸಿದ್ದಾರೆ. ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ಐದು ದಿನಕ್ಕೆ ತನಿಖಾ ಅನ್ವಯ ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ಕಸ್ಟಡಿಗೆ ಬಿಟ್ಟುಕೊಟ್ಟಿತ್ತು. ಆರೋಪಿಯನ್ನು ಕೊಲೆ ಸಂಭವಿಸಿದ ಫೆಬ್ರವರಿ 2ರಂದೇ ಸೆರೆ ಹಿಡಿಯಲಾಗಿ ತ್ತಾದರೂ ಸ್ಥಳೀಯರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇನ್ನಷ್ಟು ಪುರಾವೆಗಳ ಸಂಗ್ರಹಕ್ಕಾಗಿ ಸ್ಥಳಕ್ಕೆ ಕರೆದು ತರಲಾಗಿರಲಿಲ್ಲ. ಫೆಬ್ರವರಿ 2ರಂದು ಸಂಜೆ ಕೊಲೆ ಪ್ರಕರಣ ನಡೆದಿತ್ತು. ಕುಂಜತ್ತೂರು, ಹಿಲ್‌ಟಾಪ್‌ನ ಮರಿಯಂ ಜುಮೈಲ (18), ಪತ್ನಿಯ ಸಹೋದರಿ ಪತಿಯಾದ ಶೇಕುಂಞಿ (60) ಎಂಬಿವರನ್ನು ದಾರುಣವಾಗಿ ಕೊಲೆಗೈಯ್ಯಲಾಗಿತ್ತು.
ಮರಿಯಂ ಜುಮೈಲ ಸಂಜೆ ವೇಳೆಯಲ್ಲಿ ಹಾಗೂ ಶೇಕುಂಞಿ ಮರು ದಿನ ಬೆಳಿಗ್ಗೆ ಮೃತಪಟ್ಟಿದ್ದರು. ಉಮ್ಮರ್ ಫಾರೂಕ್ ಹಾಗೂ ಪತ್ನಿ ತಾಹಿರಳ ಮಧ್ಯೆಗಿದ್ದ ವೈಷಮ್ಯವನ್ನು ಮಾತುಕತೆ ಮೂಲಕ ಮುಗಿಸಲು ಬೇಕಾಗಿ ಮಧ್ಯಸ್ಥಿಕೆ ಚರ್ಚೆ ನಡೆಯುತ್ತಿದ್ದ ಮಧ್ಯೆ ಅವಳಿ ಕೊಲೆಗೆ ಹೇತುವಾದ ಅಕ್ರಮ ಘಟನೆ ಜರಗಿದೆ. ಚರ್ಚೆಗಳ ಮಧ್ಯೆ ಕೋಪಗೊಂಡ ಉಮ್ಮರ್ ಫಾರೂಕ್ ಕತ್ತಿ ತೆಗೆದು ಶೇಕುಂಞಿ ಅವರನ್ನು ಆಕ್ರಮಿಸಿದ್ದನು. ಆಕ್ರಮಣವನ್ನು ತಡೆಯಲೆತ್ನಿಸಿದಾಗ ಮರಿಯಂ ಜುಮೈಲಳ ಕುತ್ತಿಗೆಗೆ ಗಾಯವುಂಟಾಗಿದೆ. ಆರೋಪಿ ಉಪಯೋಗಿಸಿದ ಕತ್ತಿಯನ್ನು ಈ ಹಿಂದೆಯೇ ಪೊಲೀಸರು ವಶಕ್ಕೆ ಪಡೆದಿದ್ದರು. ಆರೋಪಿಯನ್ನು ಕೊಲೆ ನಡೆದ ಮನೆಗೆ ಕರೆತಂದಾಗ ನಾಟಕೀಯರಂಗಗಳು ಉಂಟಾಗಿದೆ. ಪತ್ನಿ ಸಹಿತವಿರುವ ಮಹಿಳೆಯರು ಉಮರುಲ್ ಫಾರೂಕ್ ವಿರುದ್ಧ ಹಲ್ಲೆಗೆ ಮುಂದಾದರು. ಆದರೆ ಪೊಲೀಸರು ಬಹಳ ಕಷ್ಟಪಟ್ಟು ಅದನ್ನು ತಡೆದಿದ್ದಾರೆ. ಹೇಳಿಕೆ ದಾಖಲು ಮುಗಿದ ಬಳಿಕ ಆರೋಪಿಯನ್ನು ವಾಹನಕ್ಕೆ ಹತ್ತಿಸಲು ಕರೆದೊಯ್ದಾಗ ಪ್ರತಿಭಟನಾಕಾರರು ಅಲ್ಲಿಗೆ ತಲುಪಿದರು.
ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯ ಅಂಗಡಿಯೊಂದರಿಂದ ಅವಳಿ ಕೊಲೆಗೆ ಉಪಯೋಗಿಸಿದ ಕತ್ತಿ ಖರೀದಿಸಿರುವು ದಾಗಿ ಉಮರುಲ್ ಫಾರೂಕ್ ಹೇಳಿಕೆ ನೀಡಿದ್ದಾನೆ. ಇದರ ಆಧಾರದಲ್ಲಿ ಕತ್ತಿ ಖರೀದಿಸಿದ ಅಂಗಡಿಗೂ ಈತನನ್ನು ಕರೆದೊಯ್ಯಲಾಗಿದೆ. ಅಂಗಡಿಯಾತ ಇವನನ್ನು ಗುರುತುಹಿಡಿದಿದ್ದಾರೆ. ಸ್ಥಳೀಯ ಸಿಸಿ ಟಿವಿಯಲ್ಲೂ ಉಮ ರುಲ್ ಫಾರೂಕ್ ಅಂಗಡಿಗೆ ತಲುಪು ವುದು ಹಾಗೂ ಹಿಂತಿರುಗುವುದರ ದೃಶ್ಯಗಳು ಇರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಥಮವಾಗಿ ಒಂದು ಹಾರ್ಡ್‌ವೇರ್ ಅಂಗಡಿಗೆ ತೆರಳಿದ್ದನಾದರೂ ಅಲ್ಲಿ ಕತ್ತಿ ಇಲ್ಲದ ಕಾರಣ ಮತ್ತೊಂದು ಅಂಗಡಿಗೆ ಹೋಗಿರುವುದಾಗಿ ಆತ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ.






