ಕಾಸರಗೋಡು: ಮಸೀದಿಯಲ್ಲಿ ನಮಾಜು ನಡೆಸಿದ ಬಳಿಕ ಮನೆಗೆ ನಡೆದು ಹೋಗುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮುಸ್ಲಿಂ ಲೀಗ್ ಕಾರ್ಯಕರ್ತ ಮೃತಪಟ್ಟರು. ಕುಂಬಳೆ ಪೇರಾಲ್‌ನ ಅಬ್ದುಲ್ಲ (66) ಎಂಬವರು ಮೃತಪಟ್ಟ ದುರ್ದೈವಿಯಾಗಿ ದ್ದಾರೆ. ಅಕ್ಟೋಬರ್ 19ರಂದು ಮಧ್ಯಾಹ್ನ 1 ಗಂಟೆಗೆ ಪೇರಾಲ್ ನಾಟೆಕಲ್ಲಿನಲ್ಲಿ ಇವರಿಗೆ ಬೈಕ್ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ಪೇರಾಲ್‌ನ ತೇಜಸ್ (20) ಕೂಡಾ ಅಪಘಾತದಲ್ಲಿ ಗಾಯಗೊಂಡಿದ್ದರು. ಮುಸ್ಲಿಂ ಲೀಗ್‌ನ ಸಕ್ರಿಯ ಕಾರ್ಯಕರ್ತನಾಗಿದ್ದ ಅಬ್ದುಲ್ಲ ಪ್ರತೀ ದಿನ ಕುಂಬಳೆ ಲೀಗ್ ಕಚೇರಿಗೆ ಭೇಟಿ ನೀಡುತ್ತಿದ್ದರೆಂದು ನಾಗರಿಕರು ತಿಳಿಸುತ್ತಿದ್ದಾರೆ. ಮೃತರು ಪತ್ನಿ ಆಯಿಷಾ, ಮಕ್ಕಳಾದ ಮುಹಮ್ಮದ್ ಅನಸ್, ಖದೀಜ, ಅನ್ಸೀರ, ಹಸೈನಾರ್, ಅಮೃತ್ ಫಾತಿಮ, ಅಳಿಯ ಮನ್ಸೂರ್, ಸೊಸೆ ಜಮೀಲ, ಸಹೋದರ ಹಮೀದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







