ಭಾರತದಲ್ಲಿ ಮುಸ್ಲಿಮರು ಸುರಕ್ಷಿತರು; ಯಾವುದೇ ಸಂದಿಗ್ಧತೆಯಿಲ್ಲ- ಕಾಂತಾಪುರಂ

ದೆಹಲಿ: ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆಂದು ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನುಡಿದರು. ತನ್ನ ಇಷ್ಟ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಂತಾಪುರಂ ಗಮನಾರ್ಹವಾದ ಈ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮುಸ್ಲಿಮರಿಗೆ ಯಾವುದೇ ಸಂದಿಗ್ಧತೆ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗಿನ ಮಾತುಕತೆಯಲ್ಲಿ ಸಂತೋಷವಿದೆ ಎಂದು ಕಾಂತಾಪುರಂ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ವಕ್ಫ್, ತೀವ್ರ ಮತದಾರರ ಯಾದಿ ಪರಿಷ್ಕರಣೆ ಎಂಬೀ ವಿಷಯಗಳಲ್ಲಿ ಪ್ರಧಾನಮಂತ್ರಿಗೆ ತನ್ನ ಆತಂಕವನ್ನು ತಿಳಿಸಿರುವುದಾಗಿಯೂ ಅವರು ನುಡಿದರು. ಪ್ರಧಾನಮಂತ್ರಿಯೊಂದಿಗಿನ ಮಾತುಕತೆಯ ಹೆಚ್ಚಿನ ಮಾಹಿತಿಗಳನ್ನು ಬಳಿಕ ಸ್ಪಷ್ಟಪಡಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page