ಕೇರಳ ಭಾರತದ ಭೂಪಟದಲ್ಲಿಲ್ಲವೇ? ಬಜೆಟ್ ಬಗ್ಗೆ ಎಂ.ವಿ. ಗೋವಿಂದನ್ ಪ್ರಶ್ನೆ

ಕಾಸರಗೋಡು: ಕೇಂದ್ರ ಹಣಕಾಸು ಸಚಿವೆ ಲೋಕಸಭೆಯಲ್ಲಿ ನಿನ್ನೆ ಮಂಡಿಸಿದ ಬಜೆಟ್‌ನಲ್ಲಿ ಕೇರಳವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ ಯೆಂದೂ ಕೇರಳ ಭಾರತದ ಭೂಪಟದಲ್ಲಿಲ್ಲವೇ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಪ್ರಶ್ನಿಸಿದ್ದಾರೆ.

ಇಂದು ಬೆಳಿಗ್ಗೆ ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.  ಕೇಂದ್ರ ಬಜೆಟ್ ತಯಾರಿಸುವ ಮೊದಲು ರಾಜ್ಯಸರಕಾರ ಕೇಂದ್ರದೊಡನೆ 29 ಬೇಡಿಕೆಗಳನ್ನು ಮುಂದಿರಿಸಿತ್ತು. ಅದರಲ್ಲಿ ಯಾವುದನ್ನೂ ಬಜೆಟ್‌ನಲ್ಲಿ ಅಂಗೀಕರಿಸಲಾಗಿಲ್ಲ. ಆದ್ದರಿಂದ ಬಜೆಟ್‌ನಲ್ಲಿ ಕೇರಳವನ್ನು ಸಂಪೂರ್ಣವಾಗಿ ಅವಗಣಿಸಲಾಗಿದೆ. ಇದು ಪ್ರತಿಭಟನಾರ್ಹವೆಂದು ಅವರು ಹೇಳಿದ್ದಾರೆ.

You cannot copy contents of this page