ಕಾಸರಗೋಡು: ಪ್ರಾಕೃತಿಕ ದುರಂತದಿಂದ ಮನೆಗಳಿಗೆ ಹಾನಿ ಅಥವಾ ನಾಶನಷ್ಟ ಉಂಟಾದಲ್ಲಿ ಅಂತಹವರಿಗೆ ಆರ್ಥಿಕ ಸುರಕ್ಷತೆ ಖಾತರಿಪಡಿಸಲು ಗ್ರೂಪ್ ಇನ್‌ಶೂರೆನ್ಸ್ ಯೋಜನೆ ಜ್ಯಾರಿಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ರಾಜ್ಯ ಯೋಜನಾ ಆಯೋಗದ ಸದಸ್ಯ ರವಿ ರಾಮನ್ ನೇತೃತ್ವದ ಸಮಿತಿ ಈ ಬಗ್ಗೆ ಅಧಯನ ನಡೆಸಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಮಾಡಲಾದ ಶಿಫಾರಸ್ಸುಗಳನ್ನು ಅಂಗೀಕರಿಸಿ ಅದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಂತೆ ಮಳೆ, ಪ್ರವಾಹ, ಬಿರುಗಾಳಿ ಇತ್ಯಾದಿ ಪ್ರಾಕೃತಿಕ ದುರಂತಗ ಳಿಂದಾಗಿ ಮನೆ ನಷ್ಟಹೊಂದು ವವರಿಗೆಈ ಯೋಜನೆಯಿಂದ ನಷ್ಟಪರಿಹಾರ ಲಭಸಲಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿ ಸಹಾಯವೂ ಲಭಿಸಲಿದೆ. ಈ ವಿಮೆ ಯೋಜನೆಯ ಅವಧಿ ಐದು ವರ್ಷವಾಗಿದೆ. ಇದರ ಹೊರತಾಗಿ ಬಿಪಿಎಲ್ ಕುಟುಂಬಗಳ ಮನೆಗಳಿಗೆ ಇನ್‌ಡಂನಿಟಿ ಇನ್ಶೂ ರೆನ್ಸ್ ಯೋಜನೆಯನ್ನು ಜ್ಯಾರಿಗೊಳಿ ಸಲಾಗುವುದು. ಈ ಯೋಜನೆ ಪ್ರಕಾರ ಇಂತಹ ವಿಭಾಗದವರ ಮನೆ, ಉಪಕರಣ ಗಳಿಗೆ ನಷ್ಟ ಉಂಟಾದಲ್ಲಿ ಹಾಗೂ ಮನೆ ದುರಸ್ತಿ ಕೆಲಸದ ತನಕ ಮನೆಯವರು ಬಾಡಿಗೆ ಮನೆಯಲ್ಲಿ ವಾಸಿಸಬೇ ಕಾಗಿ ಬಂದಲ್ಲಿ ಅದರ ಬಾಡಿಗೆ ಈ ವಿಮೆ ಯೋಜನೆ ಪ್ರಕಾರ ಲಭಿಸಲಿದೆ. ಗರಿಷ್ಠ 10 ಲಕ್ಷ ರೂ. ತನಕ ಈ ಯೋಜನೆಯ ಸಂರಕ್ಷಣೆ ಲಭಿಸಲಿದೆ. ಇದಕ್ಕಾಗಿ ಪ್ರತಿ ಮನೆಗಳಿಗೆ ತಲಾ 250 ರೂ. ನಂತೆ ವಿಮೆಕಂತು ನಿಗದಿಪಡಿಸಲಾಗಿದೆ.
ಕೇರಳದಲ್ಲಿ ಒಟ್ಟು 32.3 ಲಕ್ಷ ಬಿಪಿಎಲ್ ಕುಟುಂಬಗಳಿವೆ. ಇವುಗಳಿಗೆ ಒಟ್ಟಾರೆಯಾಗಿ 80.75 ಕೋಟಿ ರೂ.ಗಳ ವಿಮೆ ಸವಲತ್ತು ಲಭಿಸಲಿದೆ.







