ಕುಂಬಳೆ: ಮನೆ ಪರಿಸರ, ರಸ್ತೆ ಸಹಿತ ಸಾರ್ವಜನಿಕ ಸ್ಥಳಗಳು ಶುಚಿಯಾಗಿರಬೇಕೆಂಬ ಉದ್ದೇಶದೊಂದಿಗೆ ಕುಂಬಳೆ ಭಾಸ್ಕರ ನಗರದ ನವೋದಯ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಇತ್ತೀಚೆಗಿನಿಂದ ತೀವ್ರ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಅದರ ಭಾಗವಾಗಿ ಒಂದು ವಾರ ಹಿಂದೆ ಕ್ಲಬ್‌ನ ಕಾರ್ಯಕರ್ತರು ಶಾಂತಿಪಳ್ಳದಿಂದ ಭಾಸ್ಕರನಗರ ವರೆಗೆ ರಸ್ತೆಯ ಎರಡೂ ಭಾಗವನ್ನು ಶುಚಿಗೊಳಿಸಿದ್ದರು. ರಸ್ತೆ ಹಾಗೂ ಪರಿಸರವನ್ನು ಪೂರ್ಣವಾಗಿ ಶುಚೀಕರಿಸಿದ ಕಾರ್ಯಕರ್ತರು ರಸ್ತೆ ಹಾಗೂ ಪರಿಸರವನ್ನು ಶುಚಿಯಾಗಿಡುವಂತೆ ನಾಗರಿಕರಲ್ಲಿ, ವಾಹನ ಚಾಲಕರಲ್ಲಿ ಹಾಗೂ ವ್ಯಾಪಾರಿಗಳೊಂದಿಗೆ ವಿನಂತಿಸಿದ್ದರು. ಆದರೆ ನಿನ್ನೆ ಭಾಸ್ಕರನಗರ ಸಮೀಪ ರಸ್ತೆ ಬದಿ ತ್ಯಾಜ್ಯ ಕಂಡುಬಂದಿದೆ. ಅದರಲ್ಲಿ ಆಹಾರದ ಅವಶಿಷ್ಟಗಳು, ಪ್ಲಾಸ್ಟಿಕ್ ಕವರ್‌ಗಳು ಒಳಗೊಂಡಿ ದ್ದವು. ಸಾಮಾನ್ಯವಾಗಿ ರಸ್ತೆ ಬದಿ ತ್ಯಾಜ್ಯ ಕಂಡುಬಂದರೆ ಕ್ಲಬ್ ಕಾರ್ಯಕರ್ತರು ಅದನ್ನು ತೆರವುಗೊಳಿಸಿ ಶುಚಿಗೊಳಿಸುತ್ತಿದ್ದರು. ಆದರೆ ಇದೀಗ ಈ ತ್ಯಾಜ್ಯಗಳನ್ನು ಇಲ್ಲಿ ಯಾರು ತಂದು ಎಸೆದಿದ್ದಾ ರೆಂದು ತಿಳಿಯಲು ಕ್ಲಬ್ ಕಾರ್ಯಕ ರ್ತರು ಭಾರೀ ಪ್ರಯತ್ನ ನಡೆಸಿದ್ದಾರೆ. ತ್ಯಾಜ್ಯಗಳನ್ನು ಒಂದೊಂದಾಗಿ ಪರಿಶೀಲಿಸಿದ್ದು, ಈ ವೇಳೆ ಕುಂಬಳೆ ಸಹಕಾರಿ ಆಸ್ಪತ್ರೆಯ ಮದ್ದಿನಅಂಗ ಡಿಯಿಂದ ಔಷಧಿ ಖರೀದಿಸಿರುವುದರ ರಶೀದಿ ಅದರಲ್ಲಿ ಪತ್ತೆಯಾಗಿತ್ತು. ಕೂಡಲೇ ಅದನ್ನು ತೆಗೆದು ಕ್ಲಬ್ ಕಾರ್ಯಕರ್ತರು ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ಅಲ್ಲಿ ಚಿಕಿತ್ಸೆ ಪಡೆದ ಹಸೈನಾರ್ ಎಂಬವರ ಮಾಹಿತಿ ಲಭಿಸಿತು. ಕೂಡಲೇ ಕ್ಲಬ್ ಕಾರ್ಯಕರ್ತರು ಹಸೈನಾರ್‌ರನ್ನು ಸಂಪರ್ಕಿಸಿ ಅವರೊಂದಿಗೆ ಶಾಂತಿಪಳ್ಳ ಭಾಸ್ಕರನಗರ ರಸ್ತೆಯಲ್ಲಿ ಎಸೆದ ತ್ಯಾಜ್ಯವನ್ನು ತೆರವುಗೊಳಿಸುವಂತೆ ತಿಳಿಸಿದ್ದಾರೆ. ಇದರಂತೆ ಹಸೈನಾರ್ ತ್ಯಾಜ್ಯವನ್ನು ಪೂರ್ಣವಾಗಿ ತೆಗೆದು ರಸ್ತೆ ಬದಿಯನ್ನು ಶುಚಿಗೊಳಿಸಿದರು. ನವೋದಯ ಫ್ರೆಂಡ್ಸ್ ಕಾರ್ಯಕರ್ತರು ನಡೆಸಿದ ಈ ಮಾದರಿ ಕಾರ್ಯವನ್ನು ನಾಗರಿಕರು ಅಭಿನಂದಿಸಿದ್ದಾರೆ. ಇದೇ ವೇಳೆ ಭಾಸ್ಕರನಗರದಿಂದ ಶಾಂತಿ ಪಳ್ಳವರೆಗೆ ರಸ್ತೆಯನ್ನು ಶುಚಿಯಾಗಿಡುವ ಉದ್ದೇಶದಿಂದ ರಸ್ತೆ ಬದಿ ಆರು ಸಿಸಿ ಕ್ಯಾಮರಾಗಳನ್ನು ಸ್ಥಾಪಿಸಲು ಹಾಗೂ ರಾತ್ರಿ ಹೊತ್ತಿನಲ್ಲಿ ತಲಾ 10 ಮಂದಿಯ ತಂಡ ರಸ್ತೆಯಲ್ಲಿ ಕಾವಲು ನಿರತರಾಗಲು ತೀರ್ಮಾನಿಸ ಲಾಗಿದೆ. ಕ್ಯಾಮರಾ ಸ್ಥಾಪಿಸುವಂಗವಾಗಿ ಎರಡು ಕ್ಯಾಮರಾ ಗಳನ್ನು ಇಂದೇ ಸ್ಥಾಪಿಸಲಾಗುವುದೆಂದು ಕ್ಲಬ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.






