ನೇಂದ್ರ ಬಾಳೆಯನ್ನು ಕೈಬಿಟ್ಟ ಬೆಲೆಯೇರಿಕೆ: ರಂಜಾನ್ ಮಾಸದಲ್ಲೂ ದರ ಕುಸಿತದಿಂದ ಕೃಷಿಕರು ಕಂಗಾಲು

ಕಾಸರಗೋಡು: ನಿತ್ಯೋಪಯೋಗ ಸಾಮಗ್ರಿ, ಹಣ್ಣುಹಂಪಲುಗಳ ಬೆಲೆಯೇರಿಕೆ ಕಾಲವಾದ ರಂಜಾನ್ ಮಾಸದಲ್ಲಿ ಬೆಲೆಯೇರಿಕೆಯಾಗದ ಹಣ್ಣಾಗಿದೆ ನೇಂದ್ರ ಬಾಳೆಹಣ್ಣು. ಮೂರು ಕಿಲೋ ನೇಂದ್ರ ಹಣ್ಣಿಗೆ ಇತ್ತೀಚೆಗೆ 100 ರೂ. ಆಗಿತ್ತು ಬೆಲೆ. ಆದರೆ ವಿದೇಶ ಹಣ್ಣುಗಳಿಗೆ ಬೆಲೆ ಕಡಿತ ಕಂಡು ಬರುವುದಿಲ್ಲ. ವ್ಯಾಪಾರಿಗಳಿಗೆ ನಾಲ್ಕು ಕಿಲೋ ನೇಂದ್ರ ಬಾಳೆ ಹಣ್ಣು 100 ರೂ.ಗೆ ಲಭಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಕೃಷಿಕರು ಕಂಗಾಲಾಗಿದ್ದಾರೆ.

ರಂಜಾನ್ ಮಾಸಾರಂಭದಲ್ಲೇ ಮಾವಿನ ಹಣ್ಣಿಗೆ 180ರಿಂದ 300 ರೂ.ವರೆಗೆ ಬೆಲೆ ಏರಿಕೆಯಾಗಿತ್ತು. ಆಪಲ್‌ಗೂ ದರ ಹೆಚ್ಚಳವಿದೆ. ತುರ್ಕಿ, ಇರಾನ್, ಫ್ರಾನ್ಸ್ ಎಂಬೆಡೆಗಳಿಂದ ತಲುಪುವ ಆಪಲ್‌ಗಳಿಗೆ ಕಿಲೋಗೆ ಬೆಲೆ 200ರಿಂದ 300 ರೂ.ವರೆಗಿದೆ. ವಿದೇಶ ಹಣ್ಣುಗಳಾದ ಪ್ಲಂ, ಲಿಚ್ಚಿ, ಡ್ರ್ಯಾಗನ್ ಫ್ರೂಟ್, ಸ್ಟ್ರೋಬರಿ, ಕಿವಿ, ಗ್ಲೋಬ್ ದ್ರಾಕ್ಷೆ, ಶಮಂ ಎಂಬಿವುಗಳು ಆಪಲ್‌ನೊಂದಿಗೆ ಬೆಲೆಯಲ್ಲಿ ಸ್ಪರ್ಧೆ ನೀಡುತ್ತಿವೆ. ಆದರೆ ನೇಂದ್ರ ಬಾಳೆಯನ್ನು ಬೆಲೆ ಏರಿಕೆ ಕೂಡಾ ಪರಿಗಣಿಸುತ್ತಿಲ್ಲವೆಂದು ಕೃಷಿಕರು ದೂರುತ್ತಾರೆ.

You cannot copy contents of this page