ಶಬರಿಮಲೆ ಪ್ರಕರಣದಲ್ಲಿ ಹೊಸ ತಿರುವು: ರ್ಭಗುಡಿಯ ಚಿನ್ನ ಹೊದಿಸಿದ್ದ ಪ್ರಭಾವಳಿ ಸೇರಿ ಇನ್ನಷ್ಟು ಚಿನ್ನ ಕಳವು ;  ಮತ್ತೆ ಮಾಜಿ ಸಚಿವರ ವಿಚಾರಣೆ ಸಾಧ್ಯತೆ

ತಿರುವನಂತಪುರ: ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ದೇಗುಲದಲ್ಲ್ಲಿ ದ್ವಾರಪಾಲಕ ಮೂರ್ತಿಗಳ ಚಿನ್ನ ಮಾತ್ರವಲ್ಲ ಚಿನ್ನ ಹೊದಿಸಲ್ಪಟ್ಟ ಪ್ರಭಾವಳಿ ಸೇರಿದಂತೆ ಇತರ ಹಲವು ಸಾಮಗ್ರಿಗಳನ್ನು ಕದ್ದು ಸಾಗಿಸಲಾಗಿದೆ ಎಂಬ ಮಾಹಿತಿ ವಿಶೇಷ ತನಿಖಾ ತಂಡಕ್ಕೆ ಲಭಿಸಿದೆ.

ಈ ದೇಗುಲದ ಗರ್ಭಗುಡಿ ಯೊಳಗಿನ ಶಿವ ರೂಪ ಹಾಗೂ ಇತರ ಕೆತ್ತನೆಯ ರೂಪಗಳು ಒಳಗೊಂಡ ಚಿನ್ನ ಲೇಪಿತ ಪ್ರಭಾವಳಿಯನ್ನು  ಇರಿಸಲಾಗಿದೆ.  ಇದರ ಹೊರತಾಗಿ ದಶಾವತಾರ ರೂಪಗಳು ಒಳಗೊಂಡ ಎರಡು ತಾಮ್ರದ ಕವಚಗಳು, ರಾಶಿ ಚಿನ್ಹೆಗಳು ಒಳಗೊಂಡ ಇತರ ಎರಡು ಕವಚಗಳು ಹಾಗೂ  ಗರ್ಭಗುಡಿಯ ಮೇಲಿನ ಭಾಗದ ಕವಚಗಳನ್ನು ಚಿನ್ನದಿಂದ ಲೇಪನಗೊಳಿಸಲಾಗಿತ್ತು. ಅದರ ಚಿನ್ನವನ್ನೂ ಕದ್ದು ಸಾಗಿಸಲಾಗಿದೆ. ಶ್ರೀ ಕ್ಷೇತ್ರದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚಗಳನ್ನು ಮಾತ್ರವೇ  ಕದ್ದು ಸಾಗಿಸಲಾಗಿತ್ತೆಂಬ ಮಾಹಿತಿ   ಈ ತನಕ ನಡೆಸಿದ ತನಿಖೆಯಲ್ಲಿ ಪತ್ತೆಯಾಗಿತ್ತು.  ನಂತರ ನಡೆಸಿದ ಹೆಚ್ಚಿನ ತನಿಖೆಯಲ್ಲಿ ಈಗ ಪ್ರಭಾವಳಿ ಸೇರಿದಂತೆ ಅದಕ್ಕಿಂತಲೂ ಹೆಚ್ಚು ಚಿನ್ನವನ್ನು  ದೇಗುಲದಿಂದ ಕದ್ದು ಸಾಗಿಸಲಾಗಿದೆಯೆಂಬುವುದನ್ನು ಪತ್ತೆಹಚ್ಚಲಾಗಿದೆ. ಎಸ್‌ಎಸ್‌ಇವೈ ನಡೆಸುವ ವೈಜ್ಞಾನಿಕ ರೀತಿಯ ಪರಿಶೀಲನೆ ನಂತರವೇ ಒಟ್ಟು ಎಷ್ಟು ಪ್ರಮಾಣದ ಚಿನ್ನವನ್ನು ಶಬರಿ ಮಲೆಯಿಂದ ಕದ್ದು ಸಾಗಿಸಲಾಗಿದೆಯೆಂ ಬುವುದು ಸ್ಪಷ್ಟಗೊಳ್ಳಲಿದೆಯೆಂದು ತನಿಖಾ ತಂಡ ತಿಳಿಸಿದೆ. ಈತನಕ ನಡೆಸಲಾದ ತನಿಖೆಯಲ್ಲಿ ದೇಗುಲ ದಿಂದ ೯೮೯ ಪವನ್ ಚಿನ್ನ ಕಳವುಗೈಯ್ಯ ಲಾಗಿ ದೆಯೆಂಬುವುದು ಸ್ಪಷ್ಟಗೊಂಡಿತ್ತು.

ಇದೇ ಸಂದರ್ಭದಲ್ಲಿ ಮಾಜಿ ಮುಜರಾಯಿ ಸಚಿವ ಕಡಗಂಪಳ್ಳಿ ಸುರೇಂದ್ರನ್‌ರನ್ನು ಮತ್ತೆ ವಿಚಾರಣೆಗೊಳಪಡಿಸಲು ತನಿಖಾ ತಂಡ ಮುಂದಾಗಿದೆ.  ಕಡಗಂಪಳ್ಳಿ ಯವರನ್ನು ತನಿಖಾ ತಂಡ ಮೊನ್ನೆ ಹಲವು ತಾಸುಗಳತನಕ ವಿಚಾರಣೆಗೊಳಪಡಿಸಿ   ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಅದರ ಬೆನ್ನಲ್ಲೇ ಅವರನ್ನು ಮತ್ತೆ ಹೆಚ್ಚಿನ  ವಿಚಾರಣೆಗೊಳಪಡಿಸಲು ತನಿಖಾ ತಂಡ ಮುಂದಾಗಿದೆ.

ಶಬರಿಮಲೆ ಚಿನ್ನ ಕಳವು ಪ್ರಕರಣದ ಒಂದನೇ ಆರೋಪಿ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿ  ಈ ಹಿಂದೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದನು. ಆ ವೇಳೆ ಆತನ ಜೊತೆಗೆ ಐಕ್ಯರಂಗದ ರಾಜ್ಯ ಸಂಚಾಲಕ ಹಾಗೂ ಸಂಸದರೂ ಆಗಿರುವ ಅಡೂರು ಪ್ರಕಾಶ್ ಮತ್ತು ಪತ್ತನಂತಿಟ್ಟ ಸಂಸದ ಆಂಟೋ ಆಂಟನಿ ಆತನ ಜೊತೆಗಿದ್ದರು. ಈ ಹಿನ್ನೆಲೆಯಲ್ಲಿ ಈ ಇಬ್ಬರು ಸಂಸದರ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲು ತನಿಖಾ ತಂಡ  ಮುಂದಾಗಿದೆ.

RELATED NEWS

You cannot copy contents of this page