ನೀರ್ಚಾಲು: ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಶ್ರಾವ್ಯ ಕೆ.ಎಸ್. ನೂತನ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾಳೆ. ಕಣ್ಣಿಗೆ ಬಟ್ಟೆಕಟ್ಟಿಕೊಂಡು 5 ನಿಮಿಷ 8 ಸೆಕೆಂಡ್‌ಗಳಲ್ಲಿ 500 ಮೀಟರ್ ತನಕ ಈಕೆ ಸೈಕಲ್ ಓಡಿಸಿ ಈ ನೂತನ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಕಳೆದ ಮಾರ್ಚ್ 19ರಂದು ಈಕೆ ಈ ಸಾಧನೆ ಮಾಡಿದ್ದಾಳೆ. 2025 ಮಾರ್ಚ್ 9ರಂದು ಈಕೆ ಬೇರೊಂದು ವಿಶ್ವದಾಖಲೆಯನ್ನೂ ನಿರ್ಮಿಸಿದ್ದಳು. 62 ಪದಗಳನ್ನು ಮತ್ತು ಅರ್ಥಪೂರ್ಣವಾದ ವಾಕ್ಯಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 1 ನಿಮಿಷ 58 ಸೆಕೆಂಡ್‌ಗಳಲ್ಲಿ ಓದಿ ಈಕೆ ಈ ಸಾಧನೆ ಮಾಡಿದ್ದಾಳೆ.
ಸುಮಾರು 25ರಿಂದ 30ರಷ್ಟು ವಿವಿಧ ಚಟುವಟಿಕೆಗಳನ್ನು ಈಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡುತ್ತಿದ್ದಾಳೆ. ದೃಢ ಸಂಕಲ್ಪವಿದ್ದರೆ ದೃಷ್ಟಿ ಇಲ್ಲದೆಯೂ ತಮ್ಮ ಗುರಿಯನ್ನು ತಲುಪಬಹುದು ಎಂಬುದನ್ನು ಶ್ರಾವ್ಯ ಸಾಬೀತುಪಡಿಸಿದ್ದಾಳೆ. ಪ್ರತಿಭಾನ್ವಿತಳಾದ ಈಕೆ ನೀರ್ಚಾಲು ಕುಂಜಾರು ನಿವಾಸಿ ಶ್ಯಾಮಪ್ರಸಾದ್- ಶೋಭಾ ದಂಪತಿ ಪುತ್ರಿಯಾಗಿದ್ದಾಳೆ.






