ನಿಷೇಧಿತ ಪಿಎಫ್‌ಐಗೆ ಸೇರಿದ 9 ಕೇಂದ್ರಗಳಿಗೆ ಎನ್‌ಐಎ ದಾಳಿ: ಹಲವು ದಾಖಲುಪತ್ರಗಳು ವಶ

ಕೊಚ್ಚಿ: ನಿಷೇಧಿತ ಸಂಘಟ ಯಾದ ಪೋಪ್ಯುಲರ್ ಫ್ರಂಡ್ ಆಫ್ ಇಂಡಿಯಾ (ಪಿಎಫ್‌ಐ)ಕ್ಕೆ ಸೇರಿದ ಕೇರಳದಾದ್ಯಂತವಿರುವ 9 ಕೇಂದ್ರಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ನಿನ್ನೆ ಏಕಕಾಲದಲ್ಲಿ ದಾಳಿ ನಡೆಸಿದೆ. ಎರ್ನಾಕುಳಂ, ತೃಶೂರು ಮತ್ತು ಪಾಲಕ್ಕಾಡಿನಲ್ಲಿರುವ ಪಿಎಫ್‌ಐ ಕೇಂದ್ರಗಳಿಗೆ  ಹಾಗೂ ಅವುಗಳೊಂದಿಗೆ ನಂಟು ಹೊಂದಿರುವ ಇತರ  ಕೇಂದ್ರಗಳಿಗೂ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಡಿಜಿಟಲ್ ಉಪಕರಣಗಳು ಹಾಗೂ ಇತರ ಹಲವು ದಾಖಲುಪತ್ರಗಳನ್ನು ಎನ್‌ಐಎ ಪತ್ತೆಹಚ್ಚಿ ವಶಪಡಿಸಿಕೊಂ ಡಿದೆ. ಭಾರತವನ್ನು 2047ರೊಳಗಾಗಿ ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸಲು ಪಿಎಫ್‌ಐನ ಜಿಹಾದ್ ಒಳಸಂಚು,  ಪಾಲಕ್ಕಾಡಿನ ಆರ್‌ಎಸ್‌ಎಸ್ ಮಾಜಿ ಶಾರೀರಿಕ್ ಶಿಕ್ಷಣಾ ಪ್ರಮುಖ್ ಎ. ಶ್ರೀನಿವಾಸನ್ ಕೊಲೆ ಪ್ರಕರಣ ಹಾಗೂ ಇತರ ಪ್ರಕರಣಗಳಿಗೆ ಸಂಬಂಧಿಸಿ 2022ರಲ್ಲಿ ನಡೆಸಲಾದ ದಾಳಿ ಮತ್ತು ಪರಿಶೀಲನೆಯ ಮುಂದು ವರಿಕೆಯಾಗಿ ಎನ್‌ಐಎ ನಿನ್ನೆ ದಾಳಿ ನಡೆಸಿದೆ. ಎನ್‌ಐಎಯ ಕೊಚ್ಚಿ ಘಟಕದ ನೇತೃತ್ವದಲ್ಲಿ ಮೊನ್ನೆ ತಡರಾತ್ರಿಯಿಂದ ಆರಂಭಗೊಂಡ ದಾಳಿ ನಿನ್ನೆಯ ತನಕ ಮುಂದುವರಿದಿದೆ. ದಿಲ್ಲಿಯಲ್ಲಿ ದಾಖಲಿಸಲಾದ ಪ್ರಕರಣಗಳಿಗೆ ಸಂಬಂಧಿಸಿ  ದಾಳಿ ನಡೆಸಲಾಗಿದೆ. ಆರ್ ಎಸ್‌ಎಸ್ ನೇತಾರ ಶ್ರೀನಿವಾಸನ್‌ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಸುಳಿವು ಕೂಡಾ ಎನ್‌ಐಎಗೆ ಲಭಿಸಿದೆ ಯೆಂದೂ ಅದೂ ಕೂಡಾ ದಾಳಿಗೆ ಕಾರಣ ವಾಗಿದೆ ಎಂಬ ಮಾಹಿತಿಯೂ ಹೊರಬಂ ದಿದೆ. ಈ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಸಹಾಯವೊದಗಿಸು ವವರಿಗೆ ಎನ್‌ಐಎ ದಿನಗಳ ಹಿಂದೆ ಪಾರಿತೋಷಕ ಘೋಷಿಸಿತ್ತು. ಅದರ  ಬೆನ್ನಲ್ಲೇ ಈ ದಾಳಿ ನಡೆಸಲಾಗಿದೆ.

You cannot copy contents of this page