ಜಿಲ್ಲಾ ಪಂಚಾಯತ್ ವಿವಿಧ ಡಿವಿಶನ್‌ಗಳಿಂದ  ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್‌ಗೆ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದ್ದು, ಪುತ್ತಿಗೆ ಡಿವಿಶನ್‌ನಿಂದ ಸೋಮಶೇಖರ ಜೆ.ಎಸ್, ವರ್ಕಾಡಿಯಿಂದ ಹರ್ಷಾದ್ ವರ್ಕಾಡಿ, ಪಿಲಿಕೋಡ್‌ನಿಂದ ಕರಿಂಬಿಲ್ ಕೃಷ್ಣನ್, ಉದುಮದಿಂದ ಸುಕುಮಾರಿ ಶ್ರೀಧರನ್, ಚಿತ್ತಾರಿಕ್ಕಲ್‌ನಿಂದ ವಿನ್ಸಿ ಜೈನ್, ಕಳ್ಳಾರ್‌ನಿಂದ ಸ್ಟಿಮಿ ಸ್ಟೀಫನ್, ಕಯ್ಯೂರ್‌ನಿಂದ ಸುಂದರನ್ ಸ್ಪರ್ಧಿಸುವರು. ಇವರು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ಕಲೆಕ್ಟರೇಟ್‌ಗೆ ತಲುಪಿ ನಾಮಪತ್ರ ಸಲ್ಲಿಸಿದ್ದಾರೆ.

ಈ ವೇಳೆ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಐಕ್ಯರಂಗದ ಸಂಚಾಲಕ ಗೋವಿಂದನ್ ನಾಯರ್,ಸೇವಾ ದಳ ರಾಜ್ಯಾಧ್ಯಕ್ಷ ರಮೇಶನ್ ಕರುವಾಚ್ಚೇರಿ, ಪದಾಧಿಕಾರಿಗಳಾದ ಎಂ.ಸಿ. ಪ್ರಭಾಕರನ್, ಬಿ.ಪಿ. ಪ್ರದೀಪ್ ಕುಮಾರ್, ಹರೀಶ್ ಪಿ.ನಾಯರ್, ಗೀತಾ ಕೃಷ್ಣನ್, ಧನ್ಯಾ ಸುರೇಶ್,  ರಾಜು ಕಟ್ಟಕಯಂ, ಜೋಮೋನ್ ಜೋಸ್,  ಕೆ.ವಿ. ಭಕ್ತವತ್ಸಲನ್, ಕಾರ್ತಿಕೇಯನ್, ಮಿನಿಚಂದ್ರನ್, ಸಿ.ವಿ. ಭಾವನನ್ ಭಾಗವಹಿಸಿದರು.

RELATED NEWS

You cannot copy contents of this page