ತಿರುವನಂತಪುರ: ಎರಡು ಲೈಂಗಿಕ ಪ್ರಕರಣಗಳಲ್ಲಿ ಆರೋಪಿ ಯಾಗಿ ಕಳೆದ ಎಂಟು ದಿನಗಳಿಂದ ತಲೆಮರೆಸಿಕೊಂ ಡಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿ ಲ್‌ನ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ರಾಹುಲ್‌ನನ್ನು ಹುಡುಕಿಕೊಂಡು ಪ್ರತ್ಯೇಕ ತನಿಖಾ ತಂಡ ವಯನಾಡು-ಕರ್ನಾಟಕದ ಗಡಿ ಪ್ರದೇಶಕ್ಕೆ ತಲುಪಿದೆ. ರಾಹುಲ್ ತಲೆಮರೆಸಿಕೊಂಡಿರುವ ವಾಸ ಸ್ಥಳಕ್ಕೆ ತನಿಖಾ ತಂಡ ತಲುಪುವುದನ್ನು ತಿಳಿದು ಅಲ್ಲಿಂದ ರಾಹುಲ್ ಪರಾರಿಯಾಗುತ್ತಿದ್ದಾನೆಯೇ ಎಂದು ಪೊಲೀಸರಿಗೆ ಸಂಶಯ ಸೃಷ್ಟಿಸಿದೆ. ಪೊಲೀಸರಿಂದ ರಾಹುಲ್‌ಗೆ ಮಾಹಿತಿ ಸೋರಿಕೆಯಾಗುತ್ತಿದೆಯೇ ಎಂಬ ಸಂಶಯ ಕೂಡಾ ಹುಟ್ಟಿಕೊಂಡಿದೆ. ಎಸ್‌ಐಟಿಯ ಕಾರ್ಯಾಚರಣೆ ಗುಪ್ತವಾಗಿ ನಡೆಯಬೇಕೆಂದು ಉನ್ನತ ಪೊಲೀಸ್ ಅಧಿಕಾರಿಗಳು ನಿರ್ದೇಶ ನೀಡಿದ್ದಾರೆ. ರಾಹುಲ್‌ಗಾಗಿ ಕರ್ನಾಟಕದಲ್ಲಿ ವ್ಯಾಪಕ ಹುಡುಕಾಟ ನಡೆಯುತ್ತಿದೆ. ನಿನ್ನೆ ಬೆಂಗಳೂರಿಗೆ ರಾಹುಲ್ ತಲುಪಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ಪೊಲೀಸರು ಸುತ್ತುವರಿದು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ರಾಹುಲ್ ನನ್ನು ಬೆಂಗಳೂರಿಗೆ ತಲುಪಿಸಿದ ಕಾರಿನ ಚಾಲಕ ಕೇರಳೀಯನಾದ ಜೋಸ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮೂಲಕ ತಲೆಮರೆಸಿ ಕೊಂಡಿರುವ ರಾಹುಲ್‌ನನ್ನು ಪತ್ತೆಹ ಚ್ಚಲು ಸಾಧ್ಯವಾಗಲಿದೆ ಯೆಂಬ ತುಂಬು ನಿರೀಕ್ಷೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಸುಮಾರು ೭೫ ಕಿಲೋ ಮೀಟರ್ ದೂರದಲ್ಲಿರುವ ನ್ಯಾಯವಾದಿಯೊ ಬ್ಬರನ್ನು ಭೇಟಿಯಾಗಲು ಜೋಸ್‌ನ ಕಾರಿನಲ್ಲಿ ರಾಹುಲ್ ಸಂಚರಿಸಿರುವುದಾಗಿ ತಿಳಿದುಬಂದಿದೆ.
ಇದೇ ಸಂದರ್ಭದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರಾಹುಲ್ ಸಲ್ಲಿಸಿ ರುವ ಅರ್ಜಿ ಮೇಲಿನ ತೀರ್ಪನ್ನು ತಿರುವನಂತಪುರ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಇಂದು ಘೋಷಿಸಲಿದೆ. ಇದು ರಾಹುಲ್‌ಗೆ ಅತೀ ನಿರ್ಣಾಯಕವಾಗಲಿದೆ.







