ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಅರೆನಗ್ನ ಫೊಟೋ ಪ್ರಚಾರ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಅರೆನಗ್ನ ಫೊಟೋವನ್ನು ವಾಟ್ಸಪ್‌ನಲ್ಲಿ ಪ್ರಚಾರ ಪಡಿಸಲಾಗಿದೆ ಎಂಬ ದೂರಿನಂತೆ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಚಿತ್ತಾರಿಕಲ್, ಕಡುಮೇನಿ ಕರಿಮಾಡಂ ಹೌಸ್‌ನ ಕೆ.ಎ. ಜೋರ್ಜ್‌ರ ದೂರಿನಂತೆ ಕಣ್ಣಿವಯಲ್, ಚಿರವಿಳಯಿಲ್ ಶಾಜಹಾನ್, ಚಿತ್ತಾರಿಕಲ್‌ನ ಸ್ನೇಹಜನ್ ಎಂಬಿವರ ವಿರುದ್ಧ ಚಿತ್ತಾರಿಕಲ್ ಪೊಲೀಸರು ಕೇಸು ದಾಖಲಿಸಿದ್ದಾರೆ.

ಈಸ್ಟ್ ಎಳೇರಿ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಅರೆನಗ್ನ ಫೊಟೋ ಪ್ರಚಾರಪಡಿಸಲಾಗಿದೆ ಎಂದು ದೂರಲಾಗಿತ್ತು. ನಕಲಿಯಾಗಿ ಸೃಷ್ಟಿಸಿ ಮುಖ್ಯಮಂತ್ರಿಗೆ ಅವಮಾನಕರವಾಗುವ ರೀತಿಯಲ್ಲಿ ಪ್ರಚಾರಪಡಿಸಿದ ಬಗ್ಗೆ ಕೇಸು ದಾಖಲಿಸಲಾಗಿದೆ.

You cannot copy contents of this page