ಹೊಸದುರ್ಗ: ವೆಳ್ಳರಿಕುಂಡ್ ಪರಪ್ಪ ನಿವಾಸಿಯಾದ ನರ್ಸ್ ಸೌದಿ ಅರೇಬಿಯಾದ ರಿಯಾದ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಬಿರಿಕುಳಂ ರತೀಶ್ರ ಪತ್ನಿ ಚಿಪ್ಪಿ (36) ನದೀಂನ ವಾಸ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಳೆದ ಮೂರು ವರ್ಷದಿಂದ ನದೀಂನ ಖಾಸಗಿ ಕ್ಲಿನಿಕ್ನಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಈ ಮೊದಲು ಕಾಞಂಗಾಡ್ ಖಾಸಗಿ ಮೆಡಿಕಲ್ ಸಂಸ್ಥೆಯಲ್ಲೂ ಕೆಲಸ ನಿರ್ವಹಿಸಿದ್ದರು. ಚಿಪ್ಪಿಯ ಸಾವಿನ ಬಗ್ಗೆ ತಿಳಿದು ಸೌತ್ ಆಫ್ರಿಕಾದಲ್ಲಿರುವ ಪತಿ ರತೀಶ್ ಊರಿಗೆ ತಲುಪಿದ್ದಾರೆ. ಮೃತದೇಹವನ್ನು ಊರಿಗೆ ತರಲಿರುವ ಯತ್ನ ಮುಂದುವರಿಯುತ್ತಿದೆ. ಮೃತರು ಪತಿ, ಮಕ್ಕಳಾದ ಅನುನಂದ, ರತೀಶ್, ದಿವ್ಯಾ ರತೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





