ಮಾದಕದ್ರವ್ಯ ಸಹಿತ ಓರ್ವ ಸೆರೆ: ಇನ್ನೋರ್ವ ಪರಾರಿ

ಕಾಸರಗೋಡು: ಮಾದಕದ್ರವ್ಯ ಕೈವಶವಿರಿಸಿಕೊಂಡ ಆರೋಪದಂತೆ ಮೇಲ್ಪರಂಬ ಪೊಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿ ದ್ದಾರೆ.

ತೆಕ್ಕಿಲ್ ಚಟ್ಟಂಚಾಲ್ ನಿಜಾಮುದ್ದೀನ್‌ನಗರದ ಕೊರಕುನ್ನು ಮೊಟ್ಟದ ಅಹಮ್ಮದ್ ಕಬೀರ್ ಬಿ.ಎಂ (36) ಮತ್ತು ಕಣ್ಣೂರು ನಿವಾಸಿ ಎನ್ನಲಾಗಿರುವ ಡಾ. ಮುಹಮ್ಮದ್ ಸುನೀರ್  ಎಂಬಿವರ ವಿರುದ್ಧ ಈ ಪ್ರಕರಣ ದಾಖಲಿಸ ಲಾಗಿದ್ದು, ಆ ಪೈಕಿ ಅಹಮ್ಮದ್ ಕಬೀರ್‌ನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಆ ವೇಳೆ ಪರಾರಿಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ೩.೨೮ ಗ್ರಾಂ ಎಂಡಿಎಂಎ ಮತ್ತು ೧೦.೬೫ ಗ್ರಾಂ ಗಾಂಜಾವನ್ನು ಆರೋ ಪಿಗಳಿಂದ ವಶಪಡಿಸ ಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ ಚಟ್ಟಂಚಾಲ್ ಜಂಕ್ಷ ನ್ ಸಮೀಪದ ರಸ್ತೆಯಲ್ಲಿ ಆರೋ ಪಿಗಳು ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿ ಸಿದಾಗ ಈ ಮಾದಕದ್ರವ್ಯ ಪತ್ತೆಯಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page