ಓರ್ವನ ಪ್ರಿಯತಮೆಯೊಂದಿಗೆ ಬೇರೊಬ್ಬನಿಗೆ ಪ್ರೇಮ: ತಂಡದಿಂದ ಮಧ್ಯವರ್ತಿ ಮೇಲೆ ಮಾರಕಾಯುಧಗಳಿಂದ ಹಲ್ಲೆ

ಕುಂಬಳೆ: ಪ್ರಿಯತಮೆಯನ್ನು ಪ್ರೀತಿಸುವ ಬೇರೊಬ್ಬನ ಮೇಲೆ ದ್ವೇಷ ತೀರಿಸಲು ಮಾರಕಾಯುಧಗ ಳೊಂದಿಗೆ ತಲುಪಿದ ಪ್ರಿಯಮನ ಸಹಿತ ೮ ಮಂದಿಯ ತಂಡ ಮಧ್ಯವರ್ತಿ ಮೇಲೆ ಹಲ್ಲೆಗೈದು ಗಂಭೀರ ಗಾಯ ಗೊಳಿಸಿದ ಘಟನೆ ನಡೆದಿದೆ. ಹಲ್ಲೆಗೀ ಡಾದ ಕುಂಬಳೆ ಮಾಟೆಂಗುಳಿಯ ಮೊಹಮ್ಮದ್ ಅಫ್ನಾನ್ ಫಹದ್ (19)ನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.   ತಲೆ ಸಹಿತ ದೇಹದಾದ್ಯಂತ ಕಬ್ಬಿಣದ ಸರಳುಗ ಳಿಂದ ಹೊಡೆತದ ಗಾಯಗಳು ಉಂಟಾಗಿದೆ.

ನಿನ್ನೆ  ರಾತ್ರಿ 12.30 ಕ್ಕೆ ಈ ಘಟನೆ ನಡೆದಿದೆ.  ಬೇರೊಬ್ಬನ ಪ್ರಿಯತಮೆಯೊಂದಿಗೆ ಮೊಹಮ್ಮದ್ ಅಫ್ನಾನ್ ಫಹದ್‌ನ ಸ್ನೇಹಿತನಾದ ಅಂಗಡಿಮೊಗರಿನ ಯಾನಿ ಎಂಬಾ ತನಿಗೆ  ಪ್ರೇಮವಿದೆಯೆಂದು ಆರೋಪಿಸಿ  ಯುವತಿಯ ಪ್ರಿಯತಮ ಸೇರಿದಂತೆ 8 ಮಂದಿ  ಮಧ್ಯರಾತ್ರಿ ಕುಂಬಳೆ ಪೇ ಟೆಗೆ ತಲುಪಿತ್ತು. ಯಾನಿ ಪೇಟೆಯಲ್ಲಿರುವುದನ್ನು ತಿಳಿದು  ಎರಡು ಕಾರುಗಳಲ್ಲಿ ಮಾರಕಾಯುಧಗಳೊಂದಿಗೆ  ತಂಡ ಅಲ್ಲಿಗೆ ಬಂದಿರುವುದಾಗಿ ಹೇಳಲಾಗುತ್ತಿದೆ.  ಈ ವೇಳೆ ಕುಂಬಳೆ-ಬದಿಯಡ್ಕ ರಸ್ತೆಯ ಹೋಟೆಲೊಂದರ ಸಮೀಪ   ಯಾನಿ ಹಾಗೂ ಫಹದ್ ನಿಂತು ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ತಂಡ ಯಾನಿ ಯೊಂದಿಗೆ  ವಾಗ್ವಾದಕ್ಕಿಳಿದಿದ್ದು, ಈವೇಳೆ ಮೊಹಮ್ಮದ್ ಅಫ್ನಾನ್ ಫಹದ್ ಮಧ್ಯ ಪ್ರವೇಶಿಸಿ ಸಮಾ ಧಾನಪ ಡಿಸಲು  ಪ್ರಯತ್ನಿಸಿರುವುದಾಗಿ ಹೇಳಲಾಗುತ್ತಿದೆ.  ಇದರಿಂದ ತಂಡ   ಫಹದ್‌ನ ಮೇಲೆ   ಮಾರಕಾಯುಧ ಗಳಿಂದ ಆಕ್ರಮಿಸಿರುವುದಾಗಿ ದೂರಲಾಗಿದೆ.  ಫಹದ್‌ನ ಮೇಲೆ ತಂಡ ಹಲ್ಲೆಗೈಯ್ಯುವುದನ್ನು ಕಂಡು ಯಾನಿ ಅಲ್ಲಿಂದ ಓಡಿ ಪರಾರಿಯಾಗಿ ದ್ದಾನೆ.  ಯಾನಿ ಮೇಲಿನ ದ್ವೇಷವನ್ನು ಫಹದ್‌ನ ಮೇಲೆ ತೀರಿಸಿ ತಂಡ ಅಲ್ಲಿಂದ  ಕಾಲ್ಕಿತ್ತಿದೆ.  ಹಲ್ಲೆಗೈದ ತಂಡದಲ್ಲಿ ಕುಂಬಳೆಯ  ಜಾಸಿ, ಫಸಲ್ ರಹ್ಮಾನ್, ಹಾಶಿಂ, ನಿಹಾಲ್, ಮಿನ್ಹಾಜ್, ಫಿರೋಸ್, ಅನಸ್ ಸಹಿತ ೮ ಮಂದಿ ಇದ್ದರೆಂದು ಹೇಳಲಾಗುತ್ತಿದೆ. ಇವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page