ಪತ್ನಿ ನೀಡಿದ ವಿವಾಹ ವಿಚ್ಛೇಧನ ಪ್ರಕರಣ ನಾಳೆ ಪರಿಗಣಿಸಲಿರುವಂತೆ ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೈವಳಿಕೆ: ಕಯ್ಯಾರಿನಲ್ಲಿ ಯುವಕನೋರ್ವ ಮನೆ ಸಮೀಪದ ಮರದಲ್ಲಿ ನೇಣುಬಿಗಿದು ಸಾವಿಗೀಡಾ ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಿಲಿಯನ್ನೂರಿನ ಬಾಲಚಂದ್ರ (44) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಮನೆ ಸಮೀಪದ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ವಿವಾಹ ವಿಚ್ಛೇಧನ ಆಗ್ರಹಿಸಿ ಪತ್ನಿ ದೀಪಿಕಾ ನೀಡಿದ ಪ್ರಕರಣವನ್ನು ನಾಳೆ ಪರಿಗಣಿಸಲಿರುವಂತೆ ಬಾಲಚಂದ್ರ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.  ಬಾಲಚಂದ್ರರ ತಾಯಿ ಲಲಿತ ಈ ಹಿಂದೆ ನಿಧನರಾಗಿದ್ದರು. ಪತ್ನಿ ಹಾಗೂ ನಾಲ್ಕು ವರ್ಷ ಪ್ರಾಯದ ಪುತ್ರನೊಂದಿಗೆ ತಾಯಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ತಂದೆ ರಾಧಾಕೃಷ್ಣ ರೈ  ಜೊತೆ ಬಾಲಚಂದ್ರ   ವಾಸಿಸುತ್ತಿದ್ದರು.

You cannot copy contents of this page