ಎಡನೀರು: ಶುಕ್ರಿಯ ಬಸ್ ಮಾಲಕ, ಚೆಂಗಳ ಪಂಚಾಯತ್ ೩ನೇ ವಾರ್ಡ್ ಮುಸ್ಲಿಂ ಲೀಗ್ ಉಪಾ ಧ್ಯಕ್ಷ ಅಬ್ದುಲ್ಲ ಮಂಡಲಿಕ್ಕಾಡ್ (55) ನಿಧನ ಹೊಂದಿದರು. ಮುಹಿಯು ದ್ದೀನ್ ಜಮಾಯತ್ ಸಮಿತಿ ಉಪಾಧ್ಯಕ್ಷ, ನೆಲ್ಲಿಕಟ್ಟೆ ಟಾಸ್ಕ್‌ಕ್ಲಬ್ ಉಪಾಧ್ಯಕ್ಷ, ಬಸ್ ಓನರ್ಸ್ ಅಸೋಸಿಯೇಶನ್ ಸದಸ್ಯನಾಗಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಸುರಯ್ಯಾಬಿ, ಮಕ್ಕಳಾದ ಅಶ್‌ರೀದ್, ಅನ್ಶೀದ್, ಅಸ್ನೀನ, ಅಸ್ಮಿನ, ಅಳಿಯ ಮಿರ್ಷಲ್, ಸೊಸೆ ಶಹಾನ, ಸಹೋದರರಾದ ಇಬ್ರಾಹಿಂ, ಅಲಿ, ಉಮ್ಮರ್, ಸಹೋದರಿಯರಾದ ನಬೀಸ, ಆಮಿನ, ಅಸ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಅಬ್ದುಲ್ ಖಾದರ್ ಈ ಹಿಂದೆ ನಿಧನರಾಗಿದ್ದಾರೆ.







