ಪದ್ಮಶಾಲಿ ಸಮಾಜಸೇವಾ ಸಮಿತಿ ವಾರ್ಷಿಕ ಮಹಾಸಭೆ, ಅಭಿನಂದನೆ

ಪೈವಳಿಕೆ: ಪದ್ಮಶಾಲಿ ಸಮಾಜ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಇತ್ತೀಚೆಗೆ ಜರಗಿತು. ಸುಂದರ ಶೆಟ್ಟಿಗಾರ್ ಪೆರಿಯಪ್ಪಾಡಿ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ಉಮೇಶ್ ಶೆಟ್ಟಿಗಾರ್ ಕುಂಡೇರಿ ಅಧ್ಯಕ್ಷತೆ ವಹಿಸಿದರು. ಗುರುಪ್ರಸಾದ್ ಶೆಟ್ಟಿಗಾರ್ ಕೋಡಿಬೈಲು, ಹರೀಶ್ಚಂದ್ರ ಶೆಟ್ಟಿಗಾರ್ ಉದ್ಯಾವರ, ಹರೀಶ ಶೆಟ್ಟಿಗಾರ್ ಬಿಜೈ, ಕಿಶೋರ್ ಶೆಟ್ಟಿಗಾರ್ ಉದ್ಯಾವರ, ಸಾವಿತ್ರಿ ಶೆಟ್ಟಿಗಾರ್ ಅತಿಥಿಗಳಾಗಿ ಭಾಗವಹಿಸಿದರು. ಕೃಷ್ಣ ಮಾಸ್ಟರ್ ಚಿಪ್ಪಾರು ಸ್ವಾಗತಿಸಿದರು. ಮನ್ವಿತ್ ಬಾಯಿಕಟ್ಟೆ, ಸುಹಾಸ್ ಕುಂಡೇರಿ ಪ್ರಾರ್ಥನೆ ಹಾಡಿದರು. ಪೈವಳಿಕೆ ಗ್ರಾಮದ ನಾಲ್ಕು ಮಂದಿ ಹಿರಿಯರಿಗೆ ಗೌರವಾರ್ಪಣೆ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೯೦ಶೇ.ಗಿಂತ ಹೆಚ್ಚು ಅಂಕ ಪಡೆದ ಮೂರು ಮಂದಿ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಧಕರಾದ ೭ ಮಂದಿಯನ್ನು ಅಭಿನಂದಿಸಲಾಯಿತು. ಎಲ್‌ಎಸ್‌ಎಸ್, ಯುಎಸ್‌ಎಸ್ ಸ್ಕಾಲರ್‌ಶಿಪ್‌ಗೆ ಅರ್ಹರಾದ ವಿದ್ಯಾರ್ಥಿಗಳನ್ನು ಗೌರವಿಸ ಲಾಯಿತು.

ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ವಾಸುದೇವ ಶೆಟ್ಟಿಗಾರ್ ಸುಂಕದಕಟ್ಟೆ ನಿರೂಪಿ ಸಿದರು. ಈಶ್ವರ ಶೆಟ್ಟಿಗಾರ್ ಪೈವಳಿಕೆ ವಂದಿಸಿದರು. ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

You cannot copy contents of this page