ಪೈವಳಿಕೆ: ಕಾಸರಗೋಡು ಜಿಲ್ಲೆಯೆಲ್ಲೆಡೆ ವಿಲೇಜ್ ಕಚೇರಿಗಳು ಅಭಿವೃದ್ದಿ ಪಥದತ್ತ ಸಾಗುತ್ತಿದ್ದರೂ ಪೈವಳಿಕೆ ವಿಲೇಜ್ ಕಚೇರಿ ಕಟ್ಟಡ ಬಿರುಕು ಬಿಟ್ಟು ಶೋಚನೀಯಾವಸ್ಥೆಯಲ್ಲಿದೆ. ಅಭಿವೃದ್ಧಿಗೊಳಿಸಲು ಅಧಿಕಾರಿಗಳು ನಿರ್ಲಕ್ಷ÷್ಯ ವಹಿಸು ತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಅಸಮÁಧಾನ ಉಂಟÁಗಿದೆ. ವರ್ಷಗಳ ಹಿಂದೆ ಅಧಿಕಾರಿಗಳು ತಲುಪಿ ಸ್ಮಾರ್ಟ್ ವಿಲೇಜ್ ಕಚೇರಿ ನಿರ್ಮಿಸಲು ಸ್ಥಳ ಪರಿಶೋಧನೆ ನಡೆಸಿದ್ದರು. ಆದರೆ ಇದುವರೆಗೂ ಯಾವುದೇ ಮಾಹಿತಿಯಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲೆನಾಡ ಹೆದ್ದಾರಿ ಬದಿಯಲ್ಲಿರುವ ಈ ವಿಲೇಜ್ ಕಚೇರಿ 62 ಸೆಂಟ್ಸ್ ವಿಸ್ತೀರ್ಣವಾದ ಸ್ಥಳ ಹೊಂದಿದೆ. ಇಲ್ಲಿ ಈ ಹಿಂದೆ ಹಳೇಯದಾದ ಕಟ್ಟಡದಲ್ಲಿದ್ದ ವಿಲೇಜ್ ಕಚೇರಿಯನ್ನು 2004ರಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಈಗ ಈ ಕಟ್ಟಡ ಬಿರುಕು ಬಿಟ್ಟು ಶೋಚನೀಯÁವಸ್ಥೆಯಲ್ಲಿದೆ. ಪ್ರಧಾನವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಇತರ ಕಡೆಗಳಿಂದ ನೀರು ತಂದು ಉಪ ಯೋಗಿಸುವ ಅವಸ್ಥೆ ಉಂಟಾಗಿದ್ದು, ಮಹಿಳಾ ಉದ್ಯೋಗಿಗಳು ಸಹಿತ ಅಧಿಕಾರಿಗಳು ಸಂಕಷ್ಟಕ್ಕೀ ಡಾಗಿದ್ದಾರೆ.
ಮಳೆಗಾಲದಲ್ಲಿ ಸೋರುವ ಈ ಕಚೇರಿಯಲ್ಲಿ ದಾಖಲೆಪತ್ರ ವಿರಿಸಲು ಭದ್ರತೆ ವ್ಯವಸ್ಥೆ ಇಲ್ಲದೆ ದಾಖಲೆಪತ್ರ ಕೊಠಡಿಯೊಳಗೆ ರಾಶಿ ಹಾಕುವ ಪರಿಸ್ಥಿತಿ ಉಂಟಾಗಿದೆ. ಕಚೇರಿಗೆ ತಲುಪುವ ಜನರಿಗೆ ಕುಳಿತುಕೊಳ್ಳಲು, ಸಭೆ ನಡೆಸಲು ಸ್ಥಳವಕಾಶದ ಕೊರತೆ ಉಂಟಾಗಿದ್ದು, ಈ ವಿಲೇಜ್ ಕಚೇರಿ ಸಮಸ್ಯೆಯ ಆಗರವಾಗಿದೆ. ಸ್ಪಾರ್ಟ್ ವಿಲೇಜ್ ಕಚೇರಿಯನ್ನಾಗಿಸಿ ಅಭಿ ವೃದ್ದಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದಾರೆ.







