ಮಂಡಿಯೂರಿದ ಪಾಕಿಸ್ತಾನ: ಭಾರತದ ಜೊತೆ ಪಂದ್ಯವಾಡಲು ಒಪ್ಪಿಗೆ

ನವದೆಹಲಿ: ಟಿ೨೦ ವಿಶ್ವಕಪ್ 2026ರಲ್ಲಿ ಭಾರತದ ಜೊತೆಗೆ ಆಡುವುದಿಲ್ಲವೆಂದು ಹೇಳಿದ್ದ ಪಾಕಿಸ್ತಾನ ಐಸಿಸಿ ನೀಡಿದ ಖಡಕ್ ನಿರ್ದೇಶದಿಂದಾಗಿ ಕೊನೆಗೂ ಮಂಡಿಯೂರಿ ಭಾರತದ ಜತೆಗಿನ ಪಂದ್ಯ ಆಡುವುದಾಗಿ ಘೋಷಿಸಿದೆ.  ಇದರಿಂದಾಗಿ ಭಾರತ-ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ದಾರಿ ಸುಗಮಗೊಂಡಿದೆ. ಮಾತ್ರವಲ್ಲ  ಈ ಎರಡು  ತಂಡಗಳ ನಡುವಿನ ಟಿ20 ವಿಶ್ವಕಪ್ 2026 ಪಂದ್ಯಗಳು ನಿಗದಿಯಂತೆ ನಡೆಯಲಿದೆ. ಬಾಂಗ್ಲಾ ದೇಶವನ್ನು ಬೆಂಬಲಿಸಿ ಪಾಕಿಸ್ತಾನ ಭಾರತದೊಂದಿಗಿನ ಪಂದ್ಯಗಳನ್ನು ಬಹಿಷ್ಕರಿಸಲು ಫೆ. 1ರಂದು ತೀರ್ಮಾನಿಸಿತ್ತು.

ಕೊನೆಗೆ ಆ ನಿಲುವಿನಲ್ಲಿ ಸಡಿಲಿಕೆ ತಂದ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಸಂಪೂರ್ಣ ಆದಾಯದ ಪಾಲು ನೀಡಬೇಕು, ಮುಂದಿನ ಬಾರಿ ಬಾಂಗ್ಲಾದೇಶ ಐಸಿಸಿ ಈವೆಂಟ್  (ಯು 19 ವಿಶ್ವಕಪ್) ಪಡೆಯಬೇಕು, ಭಾರತದೊಂದಿಗೆ ದ್ವಿಪಕ್ಷೀಯ ಸರಣಿ ಪ್ರಾರಂಭವಾಗಬೇಕು, ಭಾರತ-ಪಾಕಿಸ್ತಾನ-ಬಾಂಗ್ಲಾದೇಶ ತ್ರಿಕೋನ ಸರಣಿ ನಡೆಸಬೇಕು ಮತ್ತು ಭಾರತ ಬಾಂಗ್ಲಾದೇಶ  ಪ್ರವಾಸ ಮಾಡಬೇಕೆಂಬ ಷರತ್ತುಗಳನ್ನು ಐಸಿಸಿ ಮುಂದಿರಿಸಿತ್ತು. ಈ ಬೇಡಿಕೆಗಳನ್ನು ಐಸಿಸಿ ಸಾರಾಸಗಟಾಗಿ ತಿರಸ್ಕರಿಸಿತ್ತು. ಇದರಿಂದಾಗಿ ಬಾಲ ಮುದುಡಿಕೊಂಡ ಪಾಕಿಸ್ತಾನ ತನ್ನ ಬಹಿಷ್ಕಾರ ತೀರ್ಮಾನವನ್ನು ಹಿಂತೆಗೆದುಕೊಂಡಿದೆ. ಇದರಂತೆ ನಿಗದಿಯಂತೆ ಫೆ. 15ರಂದು ಕೊಲಂಬೋದ ಆರ್. ಪ್ರೇಮದಾಸ್ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ.

RELATED NEWS

You cannot copy contents of this page