ಬದಿಯಡ್ಕದಲ್ಲಿ ಬಸ್ ನಿಲ್ದಾಣ, ಬೋಳುಕಟ್ಟೆ ಮೈದಾನ ಆಧುನೀಕರಣ ಸಹಿತ ವಿವಿಧ ಅಭಿವೃದ್ಧಿ ಗುರಿಯಿರಿಸಿದ  ಪಂಚಾಯತ್ ಬಜೆಟ್ ಮಂಡನೆ

ಬದಿಯಡ್ಕ: ಪೇಟೆಯಲ್ಲಿ ಆಧುನಿಕ ಸೌಕರ್ಯವಿರುವ ಬಸ್ ನಿಲ್ದಾಣ, ಬೋಳುಕಟ್ಟೆ ಮೈದಾನವನ್ನು ಆಧುನೀಕರಣಗೊಳಿಸುವುದು, ಕುಡಿಯುವ ನೀರು, ಕೃಷಿ, ರಸ್ತೆ ಸಹಿತ ಸಮಗ್ರ ಅಭಿವೃದ್ಧಿಯನ್ನು ಗುರಿಯಿರಿಸಿ ಬದಿಯಡ್ಕ ಪಂಚಾಯತ್ ಬಜೆಟ್ ಮಂಡಿಸಲಾಗಿದೆ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ವಿಕಸಿತ ಬದಿಯಡ್ಕ ಧ್ಯೇಯವಾಕ್ಯದೊಂದಿಗೆ ಮಂಡಿಸಿದ ಬಜೆಟ್‌ನಲ್ಲಿ 50,10,466,48 ರೂ. ಆದಾಯ ಹಾಗೂ 43,15,171,98 ರೂ. ಖರ್ಚು ಅಂದಾಜಿಸಲಾಗಿದೆ. 69529450 ರೂ. ಉಳಿದಾಯ ನಿರೀಕ್ಷಿಸಲಾಗಿದೆ.

ವಿವಿಧ ಹೊಳೆಗಳಿಗೆ ಅಣೆಕಟ್ಟು, ಹಿರಿಯರಿಗೆ ಮನೆ ಬಾಗಿಲಿಗೆ ಚಿಕಿತ್ಸೆ ಮೊದಲಾದವು ಬಜೆಟ್‌ನ ಪ್ರಮುಖ ಅಂಶಗಳಾಗಿವೆ. ಪಂಚಾಯತ್ ಅಧ್ಯಕ್ಷ ಶಂಕರ ಡಿ. ಅಧ್ಯಕ್ಷತೆ ವಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಹಮೀದ್ ಕೆಡೆಂಜಿ, ರಜನಿ ಸಂದೀಪ್, ಅವಿನಾಶ್ ವಿ. ರೈ, ಬ್ಲೋಕ್ ಜನಪ್ರತಿನಿಧಿಗಳಾದ ಎಂ.ಎಸ್. ಮೊಯ್ದು, ಮಹೇಶ್ ವಳಕುಂಜ, ಖಾದರ್ ಮಾನ್ಯ, ಮಾಹಿನ್ ಕೇಳೋಟ್, ಶ್ಯಾಮ್ ಪ್ರಸಾದ್ ಮಾನ್ಯ, ಉದನೇಶ್ವರ ಬದಿಯಡ್ಕ, ನಾರಾಯಣ ಮಣಿ ಯಾಣಿ, ರಂಜಿತ್ ಪೊಯ್ಯೆಕಂಡ, ಸುಧಾಕರ ಬದಿಯಡ್ಕ, ಬಾಲಕೃಷ್ಣ ಶೆಟ್ಟಿ ಕಡಾರುಬೀಡು ಮಾತನಾಡಿದರು.

RELATED NEWS

You cannot copy contents of this page