ಕುಂಬಳೆ ಆಟೋರಿಕ್ಷಾ ಕಾರ್ಮಿಕರಿಗೆ ಪಂಚಾಯತ್  ಕಿರುಕುಳ ಕೊನೆಗೊಳಿಸಬೇಕು- ಬಿಎಂಎಸ್

ಕುಂಬಳೆ: ಆಟೋರಿಕ್ಷಾ ಮಜ್ದೂರ್ ಸಂಘ ಕುಂಬಳೆ ಯೂನಿಟ್ ಸಭೆ ಕುಂಬಳೆ ಜಯ ಮಾರುತಿ ವ್ಯಾಯಾಮ ಶಾಲೆಯಲ್ಲಿ ಸಮಿತಿ ಉಪಾಧ್ಯಕ್ಷ ಸುನಿಲ್‌ರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಂಬಳೆ ನಗರದಲ್ಲಿ ಪದೇ ಪದೇ ಬಸ್ ನಿಲ್ದಾಣವನ್ನು ಬದಲಾವಣೆ ಮಾಡಿ ಜನರಿಗೆ ಹಾಗೂ ಆಟೋ ಕಾರ್ಮಿಕರಿಗೆ ತೊಂದರೆ ಕೊಡುವುದನ್ನು ಕೊನೆಗೂಳಿಸಬೇಕು ಹಾಗೂ ಕುಂಬಳೆ ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗುವುದÀಕ್ಕೆ ಕಡಿವಾಣ ಹಾಕಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಕಳೆದ ಕೆಲವು ವರ್ಷಗಳಿಂದ ಕುಂಬಳೆ ನಗರದಲ್ಲಿ ಶಾಶ್ವತವಾದ ಸುಸಜಿgತ ಬಸ್ ನಿಲ್ದಾಣ ಇಲ್ಲದೆ ಪ್ರಯಾಣೆಕರು ಕಷ್ಟಪಡುತ್ತಿರುವಾಗ ಪಂಚಾಯತ್ ಅಧಿಕಾರಿಗಳು ಬಸ್ ನಿಲ್ದಾಣ ಕಾಂಪ್ಲೆಕ್ಸ್ ನಿರ್ಮಾಣ ಮಾಡದೆ ಜನರನ್ನು ವಂಚಿಸುವುದನ್ನು ಕೊನೆಗೂಳಿಸಬೇಕೆಂದು ಹಾಗೂ ಕುಂಬಳೆಗೆ ಬರುವ ಜನರಿಗೆ ಮೂಲಭೂತ ಸೌಕರ್ಯ ಏರ್ಪಡಿಸಬೇಕೆಂದು ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಅಭಿಪ್ರಾಯಪಟ್ಟರು.
ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ, ಪಂಚಾಯತ್ ಸಮಿತಿ ಅಧ್ಯಕ್ಷ ಶಿವಾನಂದ ರಾವ್, ಕುಂಬಳೆ ಯೂನಿಟ್ ಕಾರ್ಯದರ್ಶಿ ದಿವಾಕರ ರೈ ಉಜಾರ್, ಭೋಜ ರಾಜ್ ಬೆಜಪ್ಪೆ ಮಾತನಾಡಿದರು. ಆಟೋ ಚಾರ್ಜ್ ಹೆಚ್ಚಳ ಗೊಳಿಸಬೆಕೆಂದು ಆಗ್ರಹಿಸಿ ಜೂನ್ ೧೨ರಂದು ಕಾಸರಗೋಡು ತಾಲೂಕು ಆಪಿsÃಸಿಗೆ ಆಟೋ ರಿಕ್ಷಾ ಮಜೂರ್ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆಸುವ ಮುತ್ತಿಗೆಯಲ್ಲಿ ಹೆಚ್ಚಿನ ಸಂಖೆಯಲ್ಲಿ ಆಟೋ ಕಾರ್ಮಿಕರು ಭಾಗವಹಿಸಬೇಕೆಂದು ವಿನಂತಿಸಿದರು. ಭೋಜರಾಜ ಬೆಜಪ್ಪೆ ಸ್ವಾಗತಿಸಿ, ದಿವಾಕರ ರೈ ಉಜಾರ್ ವಂದಿಸಿದರು.

RELATED NEWS

You cannot copy contents of this page