ಅನಂತಪುರದಲ್ಲಿ ಆಯಿಲ್ ರೀ ಸೈಕ್ಲಿಂಗ್ ಘಟಕ: ಮಲಿನೀಕರಣ ನಿಯಂತ್ರಣ ವ್ಯವಸ್ಥೆಗಳನ್ನು ಖಚಿತಪಡಿಸಿದ ಬಳಿಕವೇ ಕಾರ್ಯಾಚರಿಸಲು ಅನುಮತಿ- ಜಿಲ್ಲಾಧಿಕಾರಿ

ಕುಂಬಳೆ: ಅನಂತಪುರ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುವ ಆಯಿಲ್ ರೀ ಸೈಕ್ಲಿಂಗ್ ಘಟಕದ ವಿರುದ್ಧ ಇರುವ ದೂರಿನಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದ್ದಾರೆ. ಮಲಿನೀಕರಣ ನಿಯಂತ್ರಣ ವ್ಯವಸ್ಥೆಗಳು ಖಚಿತಪಡಿಸಿದ ಬಳಿಕವೇ ಇದರ ಚಟುವಟಿಕೆಗಳಿಗೆ ಅನುಮತಿ ನೀಡುವು ದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಲಿನೀಕರಣ ನಿಯಂತ್ರಣ ಬೋರ್ಡ್ ಎನ್‌ವಯರೋನ್‌ಮೆಂಟಲ್ ಇಂಜಿನಿಯರ್‌ರಿಗೆ ಈ ಬಗ್ಗೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದಾರೆ. ಈ ಸಂಸ್ಥೆಯಲ್ಲಿ ಮಲಿನೀಕರಣ ನಿಯಂತ್ರಣ ಬೋರ್ಡ್ ನಡೆಸಿದ ಪರಿಶೀಲನೆ ಹಾಗೂ ಸಲ್ಲಿಸಿದ ವರದಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸ್ಥಳೀಯರ ಆರೋಗ್ಯಕ್ಕೆ ಬೆದರಿಕೆಯಾಗದು ಎಂದು, ಪರಿಸರ ಮಲಿನೀಕರಣಕ್ಕೆ ಕಾರಣವಾಗದು ಎಂದು ಪೂರ್ಣವಾಗಿ ಖಚಿತಗೊಂಡರೆ ಮಾತ್ರವೇ ಸಂಸ್ಥೆಗೆ ಇನ್ನು ಇಲ್ಲಿ ಕಾರ್ಯಾಚರಿಸಲು ಅನುಮತಿ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

RELATED NEWS

You cannot copy contents of this page