ಕಾಸರಗೋಡು: ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರದಲ್ಲಿ ಶ್ರೀ ನಿತ್ಯಾನಂದ ಸ್ವಾಮಿಯ 66ನೇ ಸಮಾಧಿ ವಾರ್ಷಿಕ, ಗುರುಪೂಜೆ ಇತ್ತೀಚೆಗೆ ನಡೆದಿದ್ದು, ಈ ವೇಳೆ ಈ ವರ್ಷದ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಜರಗಿತು. ಕ್ಷೇತ್ರದ ಅಧ್ಯಕ್ಷ ಸಿ.ವಿ. ಪೊದು ವಾಳ್ ಅಧ್ಯಕ್ಷತೆ ವಹಿಸಿದ್ದು, ಮಾಜಿ ಅಧ್ಯಕ್ಷ ಯು.ಎಸ್. ಬಾಲನ್ ಉದ್ಘಾಟಿಸಿದರು. ಡಾ. ಭರತನ್, ಕೆ.ಎನ್. ವೇಣುಗೋಪಾಲ್, ಯಶೋಧ ಚಂದ್ರನ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆ. ಸುಜಿತ್ ಕುಮಾರ್ ಸ್ವಾಗತಿಸಿ, ಕೋಶಾಧಿಕಾರಿ ಕೆ. ಮನೋಜ್ ಕುಮಾರ್ ವಂದಿಸಿದರು. ಅಕ್ಟೋಬರ್ 11ರಿಂದ 21ರವರೆಗೆ ನವರಾತ್ರಿ ಮಹೋತ್ಸವ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.






