ಪಿಎಂಶ್ರೀ ಯೋಜನೆ: ಸಹಿ ಹಾಕಿದ ಒಪ್ಪಂದವನ್ನು ರದ್ದುಪಡಿಸುವಂತಿಲ್ಲ-ಕೇಂದ್ರ

ತಿರುವನಂತಪುರ: ಪಿಎಂಶ್ರೀ ಯೋಜನೆಯನ್ನು ಕೇರಳದಲ್ಲಿ ಜ್ಯಾರಿಗೊಳಿಸುವ ವಿಷಯದಲ್ಲಿ ಮುಂದಿನ ಕ್ರಮ ನಿಲ್ಲಿಸುವಂತೆ ಆಗ್ರಹಿಸಿ ರಾಜ್ಯ ಸರಕಾರದ ತೀರ್ಮಾನವನ್ನು ರಾಜ್ಯ ಮುಖ್ಯ ಕಾರ್ಯಾದರ್ಶಿಯವರು ಇಂದು ಪತ್ರದ ಮೂಲಕ ಕೇಂದ್ರ ಸರಕಾರಕ್ಕೆ ವಿದ್ಯುಕ್ತವಾಗಿ ತಿಳಿಸಲಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಪಿಎಂಶ್ರೀ ಯೋಜನೆಯ ಒಪ್ಪಂದಪತ್ರಕ್ಕೆ ಸಹಿ  ಹಾಕಿರುವ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸುವ ಅಥವಾ ಮುಂದೂಡುವ ಹಾಗಿಲ್ಲವೆಂದು ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಅಂತಹ ವ್ಯವಸ್ಥೆಗಳು ಒಪ್ಪಂದಪತ್ರದಲ್ಲಿಲ್ಲ. ಆರ್ಥಿಕ ನೆರವು ಲಭಿಸಬೇಕಾಗಿರುವ ಕೇರಳದ ಶಾಲೆಗಳ ಪಟ್ಟಿಯನ್ನು ಈಗಾಗಲೇ ತಯಾರಿಸಲಾಗಿದೆ. ಆದ್ದರಿಂದ ಈ ಯೋಜನೆಯ ಜ್ಯಾರಿಗೊಳಿಸುವ ಸಮಯವನ್ನು ಇನ್ನು ಮುಂದೂಡಲಾಗಲೀ  ಹಿಂಪಡೆಯಲಾ ಗಲೀ ಸಾಧ್ಯವಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಕೇರಳದಂತೆ ಈ ಹಿಂದೆ ಪಂಜಾಬ್ ಸರಕಾರವೂ ಇದೇ ರೀತಿಯ ಒಡಂಬಡಿಕೆಯನ್ನು ಬಳಿಕ ರದ್ದುಪಡಿಸಿತ್ತು. ಅದರ ಹೆಸರಲ್ಲಿ ಪಂಜಾಬ್‌ಗೆ ಲಭಿಸಬೇಕಾಗಿದ್ದ ಎಲ್ಲಾ ಆರ್ಥಿಕ ನೆರವನ್ನು ಕೇಂದ್ರ ಸರಕಾರ ತಡೆದಿತ್ತು. ಅದರಿಂದ ಕಂಗಾಲಾದ ಪಂಜಾಬ್ ಸರಕಾರ ಕೊನೆಗೆ ಆ ಒಡಂಬಡಿಕೆಯನ್ನು ನವೀಕರಿಸಿದ ಬಳಿಕವಷ್ಟೇ  ಪಂಜಾಬ್‌ಗೆ ಆರ್ಥಿಕ ನೆರವು ನೀಡುವ ಕ್ರಮ ಕೇಂದ್ರ ಸರಕಾರ ಆರಂಭಿಸಿತ್ತು.

ಇದೇ ಸಂದರ್ಭದಲ್ಲಿ ಪಿಎಂಶ್ರೀ ಯೋಜನೆಯ ಹೆಸರಲ್ಲಿ ಇನ್ನು ಯಾವುದೇ ರೀತಿಯ ವಾಗ್ವಾದ ಬೇಡವೆಂಬ ನಿಲುವಿಗೆ ಸಿಪಿಐ ನೇತೃತ್ವ ಬಂದಿದೆ.  ಪಿಎಂಶ್ರೀ ಯೋಜನೆಯನ್ನು ಪ್ರತಿಭಟಿಸಿ ಕಣ್ಣೂರಿನಲ್ಲಿ ನಿನ್ನೆ ಪ್ರತಭಟನೆ ನಡೆಸಿ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿಯವರ ಪ್ರತಿಕ್ರಿತಿ ದಹನಗೈದ ಎಐವೈಎಫ್ ಕಾರ್ಯ ಕರ್ತರಿಂದ ಸಿಪಿಐ ಸ್ಪಷ್ಟೀ ಕರಣೆಯನ್ನೂ  ಕೇಳಿ ನೋಟೀಸು ಜ್ಯಾರಿಗೊಳಿಸಿದೆ. ಇದರಿಂದಾಗಿ ಪ್ರಸ್ತುತಯೋಜನೆ ಬಗ್ಗೆ ಸಿಪಿಐ ಈಗ ಮೌನಪಾಲಿಸತೊಡಗಿದೆ.

RELATED NEWS

You cannot copy contents of this page