ಕಾಸರಗೋಡು: ಪ್ರಾಯ ಪೂರ್ತಿಯಾಗದ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯನ್ನು 9 ವರ್ಷಗಳ ಬಳಿಕ ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ಶೈನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಕಣ್ಣಾಪುರ ದೇಳಿ ಜಂಕ್ಷನ್‌ನ ಮುಬಾಶಿರ್ ಮಂಜಿಲ್‌ನ ಎಂ.ಎಂ. ಮುಹಮ್ಮದ್ ಮುಬಾಶಿರ್ (29) ಬಂಧಿತ ಆರೋಪಿ. ಪೋಕ್ಸೋ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ಈತ ವಿದೇಶದಲ್ಲಿದ್ದನೆಂದೂ ಬಳಿಕ ಅಲ್ಲಿಂದ ಊರಿಗೆ ಹಿಂತಿರುಗಿದ ನಂತರ ಆತನನ್ನು ಬಂಧಿಸಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.
ಈ ಪೋಕ್ಸೋ ಪ್ರಕರಣದಲ್ಲಿ ಒಟ್ಟು 7 ಮಂದಿ ಆರೋಪಿಗಳಿದ್ದು ಆ ಪೈಕಿ ಐದು ಮಂದಿಯನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಇನ್ನೋರ್ವ ತಲೆಮರೆಸಿಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.






