ಕುಂಬಳೆ: ಚುನಾವಣಾ ಚಟುವಟಿಕೆ ಬಿರುಸುಗೊಳ್ಳುತ್ತಿರುವಂತೆಯೇ ಮೊಗ್ರಾಲ್ ಮಡಿಮು ಗರ್ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಿಸುವ ದಂಧೆ ತೀವ್ರಗೊಂಡ ಬಗ್ಗೆ ದೂರುಂಟಾಗಿದೆ. ಇದರಂತೆ ನಿನ್ನೆ ಸಂಜೆ ಕುಂಬಳೆ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹೊಳೆಯಲ್ಲಿ ಬಚ್ಚಿಟ್ಟಿದ್ದ ದೋಣಿಯೊಂದನ್ನು ಮೇಲಕ್ಕೆತ್ತಿ ಜೆಸಿಬಿ ಬಳಸಿ ನಾಶಗೊಳಿಸಿ ದ್ದರು. ಪೊಲೀಸರನ್ನು ಕಂಡೊಡನೆ ಹೊಯ್ಗೆ ಸಂಗ್ರಹ ನಡೆಸುತ್ತಿದ್ದ ತಂಡ ಅಲ್ಲಿಂದ ಪರಾರಿಯಾಗಿರು ವುದಾಗಿ ಹೇಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಹೊಯ್ಗೆ ಸಂಗ್ರಹ, ಸಾಗಾಟಕ್ಕೆ ಅವಕಾಶ ನೀಡ ಲಾಗುವುದಿಲ್ಲವೆಂದು ಇನ್‌ಸ್ಪೆಕ್ಟರ್ ಮುಕುಂದನ್ ತಿಳಿಸಿದ್ದಾರೆ. ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಜತೆಗೆ ಎಸ್‌ಐ ಪ್ರದೀಪ್ ಕುಮಾರ್, ಪ್ರೊಬೆಶನರಿ ಎಸ್‌ಐ ಅನಂತಕೃಷ್ಣನ್, ಎಎಸ್‌ಐ ಸಲಾಂ ಎಂಬಿವರು ಪಾಲ್ಗೊಂಡಿದ್ದರು.






