ನಾಗರಿಕರಿಗೆ ಕಿರಿಕಿರಿ ರಾತ್ರಿ 10ರ ಬಳಿಕ ಧ್ವನಿವರ್ದಕ ಬಳಕೆ ವಿರುದ್ಧ ಪೊಲೀಸರಿಂದ ಕ್ರಮಕ್ಕೆ ಚಾಲನೆ

ಮಂಜೇಶ್ವರ: ಸಮಾರಂಭ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ರಾತ್ರಿ 10ಗಂಟೆಯ ಬಳಿಕ ಧ್ವನಿವರ್ದಕ ಬಳಸಿದ್ದಲ್ಲಿ ಕ್ರಮಕೈಗೊಳ್ಳಲು ಪೊಲೀಸರು üತೀರ್ಮಾನಿಸಿದ್ದಾರೆ. ಈ ಹಿಂದೆಯೇ ಈ ಆದೇಶವಿದ್ದರೂ ಯಾರೂ ಪಾಲಿಸು ತ್ತಿರಲಿಲ್ಲ. ಆದರೆ ಅಪರಿಮಿತ ಶಬ್ದದಿಂದ ಕಿರಿ ಕಿರಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ದೂರು ವ್ಯಾಪಕಗೊಂಡಿರುವುದರಿAದ ಪೊಲೀಸ್ ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ರಾತ್ರಿ 10ಗಂಟೆಯ ಬಳಿಕ ಧ್ವನಿವರ್ದಕ ಬಳಸಿದ್ದಲ್ಲಿ ಅದನ್ನು ವಶಪಡಿಸಿ ಅವರ ವಿರುದ್ದ ಕ್ರಮಕೈಗೊಳ್ಳಲು ಎಲ್ಲಾ ಠಾಣೆಗಳಿಗೆ ಆದೇಶ ನೀಡಲಾಗಿದೆ. ಇದರಂತೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಕ್ರಮಕ್ಕೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ರಾತ್ರಿ ಕಾಲದಲ್ಲಿ ಗಸ್ತು ನಡೆಸುವುದನ್ನು ಬಿಗುಗೊಳಿಸಿದ್ದಾರೆ. ರಾತ್ರಿ 10ಗಂಟೆಯ ಬಳಿಕ ಧ್ವನಿವರ್ದಕ ಬಳಸುತ್ತಿರುವ ಬಗ್ಗೆ ಸ್ಥಳೀಯರಿಂದ ದೂರು ಅಥವಾ ಪೊಲೀಸರ ನೇರ ಗಮನಕ್ಕೆ ಬಂದಲ್ಲಿ ಕಸ್ಟಡಿಗೆ ತೆಗೆದು ಕ್ರಮಕೈಗೊಳ್ಳುವುದಾಗಿ ಮಂಜೇಶ್ವರ ಠಾಣೆಯ ಇನ್ಸ್ಫೆಕ್ಟರ್ ಪಿ.ಅಜಿತ್ ಕುಮಾರ್ ತಿಳಿಸಿದ್ದಾರೆ.

RELATED NEWS

You cannot copy contents of this page