ಹೊಯ್ಗೆ ಬೇಟೆಗಿಳಿದ ಪೊಲೀಸರಿಗೆ ಲಭಿಸಿದ್ದು ಎಂಡಿಎಂಎ: ಓರ್ವ ಸೆರೆ

ಉಪ್ಪಳ: ಹೊಯ್ಗೆ ಬೇಟೆಗಿಳಿದ ಪೊಲೀಸರು ಮಾದಕವಸ್ತು ಸಹಿತ ಓರ್ವನನ್ನು ಬಂಧಿಸಿದ್ದಾರೆ. ಮೂಸೋಡಿ ನಿವಾಸಿ ಮುನೀರ್ ಎಂ (36)  ಎಂಬಾತನ ಕೈಯಿಂದ 1.01 ಗ್ರಾಂ ಎಂಡಿಎಂಎ ವಶಪಡಿಸ ಲಾಗಿದೆ. ಇಂದು ಮುಂಜಾನೆ 3.15 ರ ವೇಳೆ ಉಪ್ಪಳ ಬಳಿಯ ಮೈದಾನದಲ್ಲಿ ಸಂಶಯಾಸ್ಪದವಾಗಿ ಕಂಡುಬಂದ ಮುನೀರ್‌ನನ್ನು ಎಸ್‌ಐ ವೈಷ್ಣವ್ ನೇತೃತ್ವದ ತಂಡ ತಪಾಸಣೆ ನಡೆಸಿ ದಾಗ  ಎಂಡಿಎಂಎ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ. ಉಪ್ಪಳ, ಮಣಿ ಮುಂಡ ಭಾಗಗಳ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಾಗಾಟ ನಡೆಯುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಅದರ ವಿರುದ್ಧ ಕಾರ್ಯಾಚರಣೆಗಾಗಿ ಪೊಲೀಸರು ತೆರಳುತ್ತಿದ್ದಾಗ ಎಂಡಿಎಂಎ ಸಹಿತ ಯುವಕ ಕಂಡುಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page