ಉಪ್ಪಳ: ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ವೇಳೆ ನಡೆಯುತ್ತಿದ್ದ ಜುಗಾರಿ ಕೇಂದ್ರಕ್ಕೆ ಪೊಲೀಸರು ಮಫ್ತಿ ವೇಷದಲ್ಲಿ ದಾಳಿ ನಡೆಸಿ ಏಳು ಮಂದಿಯನ್ನು ಸೆರೆಹಿಡಿದಿದ್ದಾರೆ. ಇದೇ ವೇಳೆ ಜುಗಾರಿ ನಿರತರಾಗಿದ್ದ ಇತರ 13 ಮಂದಿ ಓಡಿ ಪರಾರಿಯಾಗಿದ್ದಾರೆ. ಜುಗಾರಿ ಸ್ಥಳದಿಂದ 59,500 ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಾವೂರು ಗ್ರಾಮದ ತಚ್ಚಿರೆಪದವಿನ ಮೈದಾನ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಜುಗಾರಿ ಕೇಂದ್ರಕ್ಕೆ ಇಂದು ಮುಂಜಾನೆ 2 ಗಂಟೆ ವೇಳೆ ಮಂಜೇಶ್ವರ ಎಸ್‌ಐಗಳಾದ ಉಮೇಶ್ ಕೆ.ಆರ್, ವೈಷ್ಣವ್ ರಾಮಚಂದ್ರನ್, ಎಎಸ್‌ಐ ರಾಜೀವನ್, ಪೊಲೀಸರಾದ ಮಹಮ್ಮದ್ ಸವಾದ್, ಸಂದೀಪ್ ಎಂಬಿವರು ಮಫ್ತಿ ವೇಷದಲ್ಲಿ ದಾಳಿ ನಡೆಸಿದ್ದಾರೆ. ಮುಳಿಂಜ ಕೋಡಿಬೈಲುವಿನ ಅಬ್ದುಲ್ ಮಮ್ಮುಂಞಿ ಶಾಂತೋಡಿ (61), ಮುಡಿಪುವಿನ ಅಬ್ದುಲ್ ರಹಿಮಾನ್ (41), ಬಂಟ್ವಾಳ ಇರ್ವತ್ತೂರಿನ ಭಾಸ್ಕರ (34), ಬಂಟ್ವಾಳ ಲೋಟ್ಲಪದವಿನ ನಸೀರ್‌ಅಹಮ್ಮದ್ (52), ಬಂಟ್ವಾಳ ಜೋಡುಮಾ ರ್ಗದ ಸಮೀರ್ (46), ಕುಂಜತ್ತೂರು ಶಕ್ತಿನಗರದ ಪಿ.ವಿ.ರಾಜ(31),ಕೈಕಂಬ ಬಿಸಿ ರೋಡ್‌ನ ಮೊಹಮ್ಮದ್ ಶರೀಫ್ (41) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಗೆ ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ.





