ನೀರ್ಚಾಲು: ಇಲ್ಲಿಗೆ ಸಮೀಪದ ಪುದುಕೋಳಿಯಲ್ಲಿನ ಜುಗಾರಿ ದಂಧೆಯ ಕೇಂದ್ರಕ್ಕೆ ಬದಿಯಡ್ಕ ಪೊಲೀಸರು ನಿನ್ನೆ ದಾಳಿ ನಡೆಸಿದ್ದಾರೆ. ಇಲ್ಲಿಂದ 10 ಮಂದಿಯನ್ನು ಸೆರೆ ಹಿಡಿದಿದ್ದಾರೆ. ಮೊಗ್ರಾಲ್, ಮಧೂರು ಹೌಸ್ನ ಅಬ್ದುಲ್ ರಹ್ಮಾನ್ (60), ಮಞಂಪಾರೆಯ ಮುಹಮ್ಮದ್ ಹನೀಫ (52), ಚಂದ್ರAಪಾರೆಯ ಹನೀಫ್ ಜೋಸೆಫ್ (38), ಕಾಕುಂಜೆಯ ಕೆ. ನವೀನ್ (40), ಕೊಲ್ಲಂಗಾನದ ಬಾಪಿಸ್ಟ್ ಮೊಂತೇರೊ (52), ಮಾನ್ಯ ದೇವರಕೆರೆಯ ವಿಜಯನ್ (50), ಚುಕ್ಕಿನಡ್ಕದ ಮೊಹಮ್ಮದ್ ಸುಲೈಮಾನ್ (58) ಮೊದಲಾದ ಹತ್ತು ಮಂದಿಯನ್ನು ಸೆರೆ ಹಿಡಿಯಲಾಗಿದ್ದು, ಸ್ಥಳದಿಂದ 14,970 ರೂ. ವಶಪಡಿಸಲಾಗಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಪೊಲೀಸರು ದಾಳಿ ನಡೆಸಿದ್ದಾರೆ.






