ಮಂಜೇಶ್ವರ: ಕೋಳಿ ಅಂಕ ನಡೆಯುತ್ತಿದ್ದಸ್ಥಳಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ೪ ಮಂದಿಯನ್ನು ಸೆರೆ ಹಿಡಿದಿದ್ದಾರೆ. ಕಡಂಬಾರು ಮಜಿಬೈಲ್ ಕೊರಗಜ್ಜ ದೈವಸ್ಥಾನದ ಬಳಿಯಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದ ಮಂಜೇಶ್ವರ ಪೊಲೀಸರು ನಿನ್ನೆ ಸಂಜೆ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ದ್ದವರು ಪರಾರಿಯಾಗಲು ಯತ್ನಿಸಿದರೂ 4 ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಮಂಗಳೂರು ಜಲ್ಲಿಗುಡ್ಡೆ ಬಜಾಲ್ ನಿವಾಸಿ ವಿಕೇಶ್ (32), ಮಜಿಬೈಲ್ ನಿವಾಸಿ ಸುರೇಶ್ (33), ಉಳ್ಳಾಲ ನಿವಾಸಿ ಯಾದವ (63), ಮಂಗಳೂರಿನ ಮಹಾಬಲ (67) ಎಂಬವರನ್ನು ಸೆರೆ ಹಿಡಿಯಲಾಗಿದ್ದು, ಇವರಿಂದ 10,600 ರೂ. ಹಾಗೂ ಒಂದು ಕೋಳಿಯನ್ನು ವಶಪಡಿಸಿ ದ್ದಾರೆ. ಬಳಿಕ ಇವರಿಗೆ ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ. ಮಂಜೇಶ್ವರ ಠಾಣೆ ಎಸ್‌ಐ ವೈಷ್ಣವ್ ರಾಮಚಂದ್ರ, ಪೊಲೀಸರಾದ ಸಜೇಶ್, ವಿಜಿನ್, ನಿತಿನ್ ದಾಳಿ ನಡೆಸಿದ್ದಾರೆ.







