ಮಂಗಲ್ಪಾಡಿ: ಪ್ರತಾಪನಗರದಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದ ೪೩ನೇ ವರ್ಷದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ನಿನ್ನೆ ಸಮಾಪ್ತಿಗೊಂಡಿತು. ಗಣಪತಿ ವಿಗ್ರಹದ ಶೋಭಯಾತ್ರೆಯಲ್ಲಿ ಭಜನೆ, ಕುಣಿತ ಭಜನೆ, ಚೆಂಡೆ, ವಾದ್ಯಘೋಷ, ಮುತ್ತುಕೊಡೆ ಹಾಗೂ ಮಕ್ಕಳು, ಮಾತೆಯರ ಸಹಿತ ಹಿರಿಯರು ಪಾಲ್ಗೊಂಡಿದ್ದರು. ಮೆರವಣಿಗೆ ಉತ್ಸವಾಂಗಣದಿAದ ಹೊರಟು ಸೋಂಕಾಲು, ಕೈಕಂಬ, ಐಲ ದ್ವಾರದ ಮೂಲಕ ಸಾಗಿ ಪಾರಕಟ್ಟೆ ರಸ್ತೆಯಿಂದ ಐಲ ಶಿವಾಜಿನಗರದ ಸಿಂಧೂ ಮಹಾಸಾಗರದಲ್ಲಿ ಜಲಸ್ತಂಭನ ನೆರವೇರಿತು. ಶ್ರೀ ಗಣೇಶೋತ್ಸವ ಮತ್ತು ಶ್ರೀ ಶಾರದೋತ್ಸವ ವಿಸರ್ಜನಾ ಸ್ವಾಗತ ಸಮಿತಿ ಐಲ ಶಿವಾಜಿನಗರ ಇವರು ನೇತೃತ್ವ ನೀಡಿದರು. ಭಕ್ತರಿಗೆ ತೆರಳಲು ವೈಶಾಕ್ ಟ್ರಾವೆಲ್ಸ್ ಉಪ್ಪಳ ಇದರ ಮಾಲಕರು ಉಚಿತವಾಗಿ ಬಸ್‌ನ್ನು ಒದಗಿಸಿಕೊಟ್ಟಿದ್ದು, ಇವರಿಗೆ ಸಮಿತಿ ಅಭಿನಂದನೆ ಸಲ್ಲಿಸಿದೆ.







