ಗರ್ಭಿಣಿ ಪತ್ನಿಯನ್ನು ಡಾಕ್ಟರ್‌ಗಳ ಅನುಮತಿಯಿಲ್ಲದೆ ಡಿಸ್ಚಾರ್ಜ್ ಮಾಡಲಿಲ್ಲ: ಪರಿಯಾರಂ ಮೆಡಿಕಲ್ ಕಾಲೇಜಿನ ಲೇಬರ್ ರೂಂ ಹೊಡೆದು ಹಾನಿಗೊಳಿಸಿದ ಯುವಕ

ಪರಿಯಾರಂ: ಗರ್ಭಿಣಿಯಾದ ಪತ್ನಿಯನ್ನು ಡಾಕ್ಟರ್‌ಗಳ ಅನುಮತಿಯಿಲ್ಲದೆ ಡಿಸ್ಚಾರ್ಜ್ ಮಾಡಲು ಸಾಧ್ಯವಿಲ್ಲವೆಂಬ ನೌಕರರ  ನಿಲುವನ್ನು ಪ್ರತಿಭಟಿಸಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಲೇಬರ್ ರೂಂ ಹೊಡೆದು ನಾಶಪಡಿಸಲಾಗಿದೆ. ಘಟನೆಯಲ್ಲಿ ಕಾಞಂಗಾಡ್ ಒಳಿಂಞವಳಪ್ ನಿವಾಸಿ ರಾಶಿದ್ (24)ನನ್ನು ಪರಿಯಾರಂ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ರಾಶಿದ್‌ನ ಪತ್ನಿಯನ್ನು ಹೆರಿಗೆಗಾಗಿ ಲೇಬರ್ ಕೊಠಡಿಗೆ ಕೊಂಡೊಯ್ಯ ಲಾಗಿತ್ತು. ಈ ಮಧ್ಯೆ ತಲುಪಿದ ರಾಶಿದ್ ಪತ್ನಿಯನ್ನು ಕೂಡಲೇ ಡಿಸ್ಚಾರ್ಜ್ ಮಾಡಬೇಕೆಂದು ಆಗ್ರಹಿಸಿದ್ದನೆನ್ನ ಲಾಗಿದೆ. ಆದರೆ ಡಾಕ್ಟರ್‌ಗಳ ಅನುಮತಿ ಇಲ್ಲದೆ ಡಿಸ್ಚಾರ್ಜ್ ಮಾಡಲು ಸಾಧ್ಯವಿಲ್ಲವೆಂದು ನೌಕರರು ರಾಶಿದ್‌ಗೆ ತಿಳಿಸಿದರು. ಇದರಿಂದ ರೋಷಗೊಂಡ ರಾಶಿದ್ ಬೊಬ್ಬೆಹೊಡೆದು ನರ್ಸಿಂಗ್ ಆಫೀಸರ್ ಸನಿಲರನ್ನು ನಿಂದಿಸಿ ಲೇಬರ್ ಕೊಠಡಿಯ ಬಾಗಿಲುಗಳನ್ನು ಹಾಗೂ ಪೀಠೋಪಕರಣಗಳನ್ನು ಹೊಡೆದು ನಾಶಪಡಿಸಿರುವುದಾಗಿ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಾವಲುಗಾರ ಮಾಹಿತಿ ತಿಳಿದು  ಸ್ಥಳಕ್ಕೆ ತಲುಪಿದ್ದು, ಪೊಲೀಸರ ಜೊತೆ ಸೇರಿ ಬಹಳಷ್ಟು ಪ್ರಯತ್ನ ಪಟ್ಟು ಅಕ್ರಮವನ್ನು ಕೊನೆಗೊಳಿಸಿ ಯುವಕನನ್ನು ಸೆರೆ ಹಿಡಿಯಲಾಗಿದೆ. ಗಾಯಗೊಂಡ ರಾಶಿದ್‌ನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬಂಧನ ದಾಖಲಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page