ಮಂಜೇಶ್ವರ: 72 ನೇ ಸಹಕಾರಿ ಸಪ್ತಾಹದಂಗವಾಗಿ ನವೆಂಬರ್ 16ರಂದು ವರ್ಕಾಡಿ ಅಗ್ರಿಕಲ್ಚರ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆಯುವ ಸೆಮಿನಾರ್ ಯಶಸ್ವಿಗೊಳಿಸಲು ನಿನ್ನೆ ಸೊಸೈಟಿಯ ಅಧ್ಯಕ್ಷ ವಿಶ್ವನಾಥ ಕುದುರು ಇವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ಕಾಸರಗೋಡು ಸರ್ಕಲ್ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಆರ್ ಜಯಾನಂದ ಉದ್ಘಾಟಿಸಿ ವಿವರಿಸಿದರು. ಮಂಜೇಶ್ವರ ತಾಲೂಕಿನ ವಿವಿಧ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಸಮಿತಿಗೆ ಅಧ್ಯಕ್ಷರಾಗಿ ವಿಶ್ವನಾಥ ಕುದುರು, (ಅಧ್ಯಕ್ಷ ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ), ಉಪಾಧ್ಯಕ್ಷರಾಗಿ ರಾಮಚಂದ್ರ ಎಸ್ (ಅಧ್ಯಕ್ಷ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್), ಮೋಹನ ಮಾಸ್ಟರ್ (ಅಧ್ಯಕ್ಷ, ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್), ಮೊಹಮ್ಮದ್ ಹನೀಫ್ (ಅಧ್ಯಕ್ಷ ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್), ಶಾಂತರಾಮ ಶೆಟ್ಟಿ (ಅಧ್ಯಕ್ಷ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್), ಪ್ರಭಾಕರ ಶೆಟ್ಟಿ (ಅಧ್ಯಕ್ಷ ಮೀಂಜ ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೊ-ಆಪರೇಟಿವ್ ಸೊಸೈಟಿ), ಪ್ರೇಮ್ ಕುಮಾರ್ (ಅಧ್ಯಕ್ಷ ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್), ಕನ್ವೀನರಾಗಿ ಬೈಜುರಾಜ್ (ಸಹಕಾರಿ ಯುನಿಟ್ ಇನ್ಸ್ಪೆಕ್ಟರ್ ಮಂಜೇಶ್ವರ ಸರ್ಕಲ್), ಜಾಯಿಂಟ್ ಕನ್ವಿನರ್ ಗಳಾಗಿ ರವೀಂದ್ರ ಮಡ್ವ, ಜಯರಾಮ ಕತ್ತೆರಿಕೋಡಿ. ಉದಯಕುಮಾರ್ ಮಜಿಬೈಲ್, ಶ್ರೀವಸ್ತ ವರ್ಕಾಡಿ, ರಾಜನ್ ನಾಯರ್ ಮಂಜೇಶ್ವರ ಆಯ್ಕೆಯಾದರು.






