ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಶನ್ ಕಾಸರಗೋಡು ವೆಸ್ಟ್ ಯೂನಿಟ್‌ನಿಂದ ಪರವನಡ್ಕದಲ್ಲಿ ರುವ ವಿಶೇಷ ಆರೈಕೆ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಿತು. ಘಟಕದ ಅಧ್ಯಕ್ಷ ವಸಂತ ಕೆರೆಮನೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ವಾರ್ಡ್ ಪ್ರತಿನಿಧಿ ಚಂದ್ರ ಶೇಖರನ್ ಕುಳಂಗರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿದರು. ಸಂಯೋಜಕ ಸುಧೀಶ್, ಶಿಕ್ಷಕಿ ದಿವ್ಯಾ, ಮಿನಿ ಟೀಚರ್, ಸ್ಪೀಚ್ ತೆರಾಫಿಸ್ಟ್ ಸಿತಾರ, ಫಿಸಿಯೋ ತೆರಾಫಿಸ್ಟ್ ಭಾವನ, ಪೋಷಕರು, ಎಕೆಪಿಎ ಜಿಲ್ಲಾ ಕ್ರೀಡಾ ಸಂಯೋಜಕ ರತೀಶ್, ಸುಬ್ರಹ್ಮಣ್ಯ, ಮೈಂದಪ್ಪ, ಪದ್ಮನಾಭ, ಅಮಿತ್, ಗಣೇಶ್ ರೈ ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿ,ವಿಶೇಷ ಆರೈಕೆ ಕೇಂದ್ರದ ವಿದ್ಯಾರ್ಥಿ ಶಿವಜಿತ್‌ಕೃಷ್ಣ ವಂದಿಸಿದರು. ಸಿಹಿ ಹಂಚಲಾಯಿತು.







