ಕಾಸರಗೋಡು: ನೆದರ್ಲ್ಯಾಂ ಡ್ಗೆ ವೀಸಾ ನೀಡುವುದಾಗಿ ತಿಳಿಸಿ ಯುವಕನಿಂದ 7 ಲಕ್ಷ ರೂಪಾಯಿ ಪಡೆದು ವಂಚಿಸಿದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ. ನೀಲೇಶ್ವರ ಚಿರಪ್ಪುರಂ ಪಾಲಕ್ಕಾಟ್ ಕೃಷ್ಣ ಹೌಸ್ನ ಉಲ್ಲಾಸ್ (40) ಎಂಬಾತನನ್ನು ಚಿಟ್ಟಾರಿಕಲ್ ಪೊಲೀ ಸರು ಬಂಧಿಸಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಈತ ಊರಿಗೆ ಮರಳುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ. ವೆಸ್ಟ್ ಎಳೇರಿ ಮಂಗತ್ನ ಸಜೀವ (47) ಎಂಬವರ ಹಣ ಪಡೆದು ವಂಚಿಸಿದ ಆರೋ ಪದಂತೆ ಉಲ್ಲಾಸ್ನನ್ನು ಬಂಧಿಸಲಾಗಿದೆ. 2023 ಸೆ. 13 ಹಾಗೂ 2025 ಸೆ. 10ರ ಮಧ್ಯೆ ಸಜೀವರಿಂದ ಹಣ ಪಡೆದು ವಂಚಿಸಿರುವುದಾಗಿ ಚಿಟ್ಟಾರಿ ಕಲ್ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂ ಡಿದ್ದನು. ವೀಸಾ ಭರವಸೆಯೊಡ್ಡಿ ಈತ ಹಲವು ಮಂದಿಯಿಂದ ಹಣ ಪಡೆದು ವಂಚಿಸಿರುವುದಾಗಿ ಆರೋಪ ಉಂಟಾಗಿದೆ.





