ವರ್ಕಾಡಿ: ಸ್ವತಂತ್ರ ಕರ್ಷಕ ಸಂಘದ ವರ್ಕಾಡಿ ಪಂಚಾಯತ್ ಸಮಿತಿಯಿಂದ ನಿನ್ನೆ ವರ್ಕಾಡಿ ಕೃಷಿಭವನದ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಜರಗಿತು. ಕೃಷಿ ನಾಶ ಮಾಡುತ್ತಿರುವ ಕಾಡು ಪ್ರಾಣಿಗಳ ಉಪಟಳಕ್ಕೆ ಸರಕಾರ ಶಾಶ್ವತ ಪರಿಹಾರ ಮಾಡಬೇಕು. ಈ ವರ್ಷದ ವಿಪರೀತ ಮಳೆಯಿಂದಾಗಿ ನಾಶ ನಷ್ಟ ಸಂಭವಿಸಿದ ಕೃಷಿಕರಿಗೆ ನಷ್ಟ ಪರಿಹಾರ ಒದಗಿಸಬೇಕು. ನಷ್ಟ ಪರಿಹಾರ ಮೊತ್ತವನ್ನು ಸಂದರ್ಭಚಿತವಾಗಿ ಹೆಚ್ಚಿಸಬೇಕು, ಕೃಷಿಕರ ಪಿಂಚಣಿ ೧೦,೦೦೦ರೂ.ಗೆ ಏರಿಸಬೇಕು, ಹೈನುಗಾರಿಕೆ ಕೃಷಿಕರ ಸಂಕಷ್ಟಗಳನ್ನು ಪರಿಹರಿಸಬೇಕು, ರಸಗೊಬ್ಬರ ಕ್ರಯಕಡಿತ ಗೊಳಿಸಬೇಕು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಒದಗಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ರೈತರ ಬ್ಯಾಂಕ್ ಸಾಲದ ಹೆಸರಿನಲ್ಲಿ ಜಪ್ತಿ ಕ್ರಮ ನಿಲ್ಲಿಸಬೇಕು. ಎಲ್ಲಾ ಕೃಷಿಭ ವನದಲ್ಲೂ ತೆಂಗಿನ ಕಾಯಿ ಸಂಗ್ರಹಣಾ ಕೇಂದ್ರ ಆರಂಭಿಸ ಬೇಕು. ಅಕ್ಕಿ ಸಂಗ್ರಹಣೆಯ ಬಾಕಿ ಮೊತ್ತ ಕೂಡಲೇ ಬಿಡುಗಡೆ ಮಾಡಬೇಕು ಮೊದಲÁದ ಹಲವು ಬೇಡಿಕೆಗಳೊಂದಿಗೆ ನಡೆಸಿದ ಧರಣಿ ನಡೆಯಿತು. ಕರ್ಷಕ ಸಂಘದ ಪಂ ಚಾಯತು ಅಧ್ಯಕ್ಷ ಅಬ್ದುಲ್ ರಝÁಕ್ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್‌ನ ಮಂಡಲ ಕಾರ್ಯದರ್ಶಿ ಖಾಲಿದ್ ದುರ್ಗಿಪಳ್ಳ ಉದ್ಘಾಟಿಸಿದರು. ಕರ್ಷಕ ಸಂಘದ ಮಂಡಲ ಕಾರ್ಯದರ್ಶಿ ಅಲಿ ಎ ಖಾದರ್ ಅನೇಕಲ್ಲು ಮುಖ್ಯ ಭಾಷಣ ಮಾಡಿದರು. ಕಾರ್ಯದರ್ಶಿ ಅಬ್ದುಲ್ ಖಾದರ್ ಕಲ್ಲೂರು ಸ್ವಾಗತಿಸಿ, ಇಸ್ಮಾಯಿಲ್ ನೆಲ್ಲೆಂಗಿ ವಂದಿಸಿದರು. ಪಂಚಾಯತ್ ಮುಸ್ಲಿಂ ಲೀಗ್ ಅಧ್ಯಕ್ಷ ಕೆ. ಮೊಹಮ್ಮದ್ ಪಾವೂರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಬಿ.ಎ., ಬಾವ ಹಾಜಿ ಸೂಪಿಗುರಿ, ಬದ್ರುದ್ದಿನ್ ಪಾವೂರ್, ಅಬ್ದುಲ್ ಲತೀಫ್ ಪೊಯ್ಯ, ಇಸ್ಮಾಯಿಲ್ ನೆಲ್ಲೆಂಗಿ ಅಬ್ದುಲ್ಲ ನಡಿಬೈಲ್, ಸಾಹಿಬ್ ಕಜೆ, ಲತೀಫ್ ನೆಲ್ಲೆಂಗಿ ಅಬ್ದುಲ್ಲ ಬಹರೈನ್, ಮೂಸ ಕಜೆ, ಹಾರೋನ್ ಕೋಟೆ ಮಾರ್, ಎನ್. ಎ. ಮೊಹಮ್ಮದ್ ನಡಿಬೈಲ್, ಅಬ್ದುಲ್ ಕರೀಂ ಪಾತೂರ್ ಮೊದಲÁದವರು ಉಪಸ್ಥಿತರಿದ್ದರು. ಅನಂತರ ಈ ಬೇಡಿಕೆಗಳ ಮನವಿಯನ್ನು ಕೃಷಿ ಅದಿsಕಾರಿಗಳಿಗೆ ಸಮರ್ಪಿಸಲಾಯಿತು.
