ಮತದಾನ ದಿನದಂದು ಸಾರ್ವತ್ರಿಕ ರಜೆ ಘೋಷಣೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯ ಮತದಾನ ದಿನದಂದು ಸಾರ್ವತ್ರಿಕ ರಜೆ ಘೋಷಿಸಲು ರಾಜ್ಯ ಚುನಾವಣಾ ಆಯೋಗ ನಿರ್ದೇಶ ನೀಡಿದೆ. ಮತದಾರರಿಗ ತಮ್ಮ ಮತ ದಾನದ ಹಕ್ಕನ್ನು ಚಲಾಯಿಸಲು ಡಿಸೆಂಬರ್ 9,11ರಂದು ಸಂಬಂಧ ಪಟ್ಟ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಹಾಗೂ ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಆಕ್ಟ್ ಅನುಸಾರ ವಾಗಿರುವ ರಜೆಯನ್ನು ಮಂಜೂರು ಮಾಡಬೇಕು. ಇದರ ಜೊತೆಗೆ ರಾಜ್ಯದ ಕಾರ್ಖಾನೆ, ಪ್ಲಾಂಟೇಶನ್ ಹಾಗೂ ಇತರ ವಿಭಾಗ ನೌಕರ ರಿಗೂ ರಜೆ ಲಭ್ಯಗೊಳಿಸುವುದು ಅಥವಾ ಅವರಿಗೆ ಮತ ಚಲಾಯಿಸಲು ಇರುವ ಸೌಕರ್ಯ ನೀಡುವುದಕ್ಕೆ  ಸಂಸ್ಥೆಯ ಮಾಲಕರಿಗೆ ನಿರ್ದೇಶ ನೀಡುವುದಕ್ಕೆ  ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇ ಕೆಂದು ಆಯೋಗ ಸೂಚಿಸಿದೆ.   ಕೇಂದ್ರ ಸರಕಾರಿ ಇಲಾಖೆಗಳ, ಕೇಂದ್ರ ಸಾರ್ವಜನಿಕ ವಲಯ ಸಂಸ್ಥೆಗಳ ನೌಕರರಿಗೆ ಮತದಾನ ದಿನದಂದು ರಜೆ ಘೋಷಿಸುವುದಕ್ಕೆ ಕ್ರಮ ಕೈಗೊಳ್ಳಲು ಕೇಂದ್ರ ಪರ್ಸನಲ್ ಆಂಡ್ ಟ್ರೈನಿಂಗ್ ಇಲಾಖೆಗೆ ಚುನಾವಣಾ ಆಯೋಗ ಆಗ್ರಹಿಸಿದೆ. ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ ದಶಂಬರ ೧೧ರಂದು ರಜೆಯಾಗಿರುತ್ತದೆ.

RELATED NEWS

You cannot copy contents of this page