ಮೊಬೈಲ್ ಫೋನ್ ದುರಸ್ತಿಪಡಿಸಿ ನೀಡದ ವ್ಯಥೆ :ಪಿಯುಸಿ ವಿದ್ಯಾರ್ಥಿನಿ ವಿಷ ಸೇವಿಸಿ ಸಾವಿಗೆ ಶರಣು

ಕುಂಬಳೆ: ಮೊಬೈಲ್ ಫೋನ್‌ನ ಡಿಸ್ಲೇ ರಿಪೇರಿ ಮಾಡಿ ಕೊಡದಿರುವು ದರಿಂದ ಮನನೊಂದು  17ರ ಹರೆಯದ ವಿದ್ಯಾರ್ಥಿನಿ ಇಲಿ ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ನಡೆದಿದೆ.

ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಿದೂರು ಕಳತ್ತೂರು ಶರವಂಕರ ಲಕ್ಷ್ಮೀ ನಿಲಯದ ದಾಮೋದರ ಎಂಬವರ ಪುತ್ರಿ ಎಂ.ಡಿ. ಪೂಜಾ (17) ಮೃತಪಟ್ಟ ವಿದ್ಯಾರ್ಥಿನಿಯಾಗಿ ದ್ದಾಳೆ. ಈಕೆ ಮಂಗಳೂರಿನಲ್ಲಿ  ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಈ ಮಧ್ಯೆ ಹಳದಿ ಕಾಮಾಲೆ ಬಾಧಿಸಿ ದೀರ್ಘಕಾಲ ಚಿಕಿತ್ಸೆಯಲ್ಲಿದ್ದುದರಿಂದ ಶಿಕ್ಷಣ ಮೊಟಕುಗೊಂಡಿತ್ತು. ಮುಂದಿನ ವರ್ಷ ಶಿಕ್ಷಣ ಮುಂದುವರಿಸಲು ನಿರ್ಧರಿಸಿದ್ದಳೆನ್ನಲಾಗಿದೆ. ಕೆಲವು ದಿನಗಳ ಹಿಂದೆ ಪೂಜಾಳ ಮೊಬೈಲ್ ಫೋನ್ ಹಾನಿಗೀಡಾಗಿತ್ತು. ಇದನ್ನು ದುರಸ್ತಿಪಡಿ ಕೊಡಬೇಕೆಂದು ಮನೆಯವರೊಂದಿಗೆ ನಿರಂತರ ಆಗ್ರಹಪಟ್ಟಿದ್ದಳೆನ್ನಲಾಗಿದೆ. ಆದರೆ ಮನೆಯವರಿಗೆ ಅದು ಸಾಧ್ಯವಾ ಗಲಿಲ್ಲ. ಫೋನ್ ದುರಸ್ತಿಪಡಿಸಿ ನೀಡದಿದ್ದಲ್ಲಿ ಇಲಿ ವಿಷ ಸೇವಿಸುವುದಾಗಿ ಪೂಜಾ ಹಲವು ಬಾರಿ ಬೆದರಿಕೆ ಯೊಡ್ಡಿದ್ದರೆನ್ನಲಾಗಿದೆ. ಕಳೆದ ಬುಧವಾರ ಸಂಜೆ 6ಗಂಟೆಗೆ ತಾನು ಇಲಿ ವಿಷ ಸೇವಿಸಿರುವುದಾಗಿ ಪೂಜಾ ತಿಳಿಸಿದ್ದಳು.  ಆದರೆ ಈ ಹಿಂದೆ ಹಲವು ಬಾರಿ ಇದೇ ರೀತಿ ಬೆದರಿಕೆಯೊಡ್ಡಿ ರುವುದರಿಂದ ಈಕೆ ಹೇಳುವುದನ್ನು ಮನೆಯವರು ನಂಬಿರಲಿಲ್ಲ. ಆದರೆ ರಾತ್ರಿ 10 ಗಂಟೆ ವೇಳೆ ಬಾಲಕಿ  ಗಂಭೀರ ಅಸ್ವಸ್ಥಗೊಂ ಡಾಗಲೇ ವಿಷಯ ಸತ್ಯವೆಂದು ಮನವರಿಕೆಯಾಯಿತು. ಕೂಡಲೇ ದೇರಳಕಟ್ಟೆಯ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ೫ ಗಂಟೆ ವೇಳೆ ಪೂಜಾ ಸಾವಿಗೀಡಾಗಿ ದ್ದಾಳೆ. ಬಾಲಕಿಯ ಅಕಾಲಿಕ ನಿಧನ ದಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಘಟನೆ ಬಗ್ಗೆ ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.

ಮೃತಳು ತಂದೆ, ತಾಯಿ ಗಿರಿಜ, ಸಹೋದರ ಮನಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.

You cannot copy contents of this page