ಪುಳಿಕುತ್ತಿ ಸ್ಮಶಾನದ ಅಭಿವೃದ್ಧಿ ಮರೀಚಿಕೆ: ಮೃತದೇಹಗಳ ಅಂತ್ಯಕ್ರಿಯೆಗೆ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಪುಳಿಕುತ್ತಿ ರುದ್ರಭೂಮಿ ಅಧಿಕಾರಿಗಳ ಅನಾಸ್ಥೆಯಿಂದ ಉಪಯೋಗಶೂನ್ಯಗೊಳ್ಳುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಇದರ ಅಭಿವೃದ್ಧಿಗೆ ಪಂಚಾಯತ್ 15 ಲಕ್ಷ ರೂ. ಹಾಗೂ ಬ್ಲೋಕ್ ಪಂಚಾಯತ್ 10 ಲಕ್ಷ ರೂ. ಮಂಜೂರು ಮಾಡಿದೆ ಎಂದು ಹೇಳಲಾಗುತ್ತಿದ್ದರೂ ಇದುವರೆಗೂ ಯಾವುದೇ ಕಾಮಗಾರಿ ಆರಂಭದ ಸೂಚನೆ ಲಭಿಸಿಲ್ಲ.

ಪ್ರಸ್ತುತ ಈ ರುದ್ರಭೂಮಿಗೆ ತಲುಪಲು ಜನರು ಸಂಕಷ್ಟಪಡುತ್ತಿದ್ದು, ಇಲ್ಲಿ ಮೃತದೇಹವನ್ನು ದಹಿಸಲು ಸೂಕ್ತ ವ್ಯವಸ್ಥೆ ಇಲ್ಲವೆನ್ನಲಾಗಿದೆ. ಬೆಳಕು, ನೀರಿನ ವ್ಯವಸ್ಥೆಯೂ ಇಲ್ಲದೆ ಕಾಡು ಪೊದೆಗಳು ಆವರಿಸಿ ಹಂದಿ ಸಹಿತ ವಿವಿಧ ಪ್ರಾಣಿಗಳ ಉಪಟಳ ಇಲ್ಲಿದೆ ಎನ್ನಲಾಗಿದೆ. ಪರಿಸರ ನಿವಾಸಿಗಳು ಆತಂಕಗೊಂಡಿದ್ದು, ಶೀಘ್ರವೇ ಈ ಪರಿಸರವನ್ನು ಅಭಿವೃದ್ಧಿಗೊಳಿಸಿ ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣ ನಡೆಸಲು ಆಗ್ರಹಿಸಿದ್ದಾರೆ.

You cannot copy contents of this page