ಕಾಞಂಗಾಡ್ ಜಿಲ್ಲಾಸ್ಪತ್ರೆಯ ವ್ಹೀಲ್ ಚೆಯರ್‌ನಲ್ಲಿ ಹೆಬ್ಬಾವು

ಹೊಸದುರ್ಗ: ಇಲ್ಲಿನ ಜಿಲ್ಲಾಸ್ಪತ್ರೆಯ ವ್ಹೀಲ್‌ಚೆಯರ್‌ನಲ್ಲಿ ಹೆಬ್ಬಾವು ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಆರ್ದ್ರಂ ಮಿಷನ್ ಅಧೀನದಲ್ಲಿ ನಿರ್ಮಿಸಿದ ಕಟ್ಟಡದ ಒಳಗಿದ್ದ ವ್ಹೀಲ್ ಚೆಯರ್‌ನಲ್ಲಿ ಸುತ್ತಿಕೊಂಡಿರುವ ರೀತಿಯಲ್ಲಿ ಹೆಬ್ಬಾವು ಪತ್ತೆಯಾಗಿದೆ. ಕರ್ತವ್ಯದಲ್ಲಿದ್ದ ನರ್ಸ್ ಇದನ್ನು ಪ್ರಥಮವಾಗಿ ಕಂಡಿದ್ದಾರೆ. ಮಾಹಿತಿ ತಿಳಿದು ಆಸ್ಪತ್ರೆಯ ಶುಚೀಕರಣ ವಿಭಾಗ ನೌಕರ ಚೆಮ್ಮಟ್ಟಂವಯಲ್‌ನ ಎಚ್. ಅರುಣ್ ಕುಮಾರ್ ಹಾವನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ಕಟ್ಟಡದ ಸಮೀಪದ ಕಾಡಿನಿಂದ ಹೆಬ್ಬಾವು ಒಳಗೆ ಪ್ರವೇಶಿಸಿರಬೇಕೆಂದು ಅಧಿಕಾರಿಗಳು ಶಂಕಿಸಿದ್ದಾರೆ.

RELATED NEWS

You cannot copy contents of this page