ತಿರುವನಂತಪುರ: ಈ ಬಾರಿ ಓಣಂ ಸಮಯದಲ್ಲಿ ಬಿವರೇಜಸ್ ಮದ್ಯದಂಗಡಿಯಿಂದ ಮಾರಾಟವಾಗುವ ಮದ್ಯ ದಾಖಲೆಗೇರಿದೆ. ಕಳೆದ ಎಂಟು ದಿನಗಳಲ್ಲಾಗಿ ಈ ಮದ್ಯದಂಗಡಿಗಳಲ್ಲಾಗಿ ಒಟ್ಟು 771.29 ಕೋಟಿ ರೂ.ಗಳ ದಾಖಲೆ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 694.96 ಕೋಟಿ ರೂ.ಗಳ ಮದ್ಯ ಮಾರಾಟವಾಗಿತ್ತು. ಈ ಬಾರಿ ಅದಕ್ಕಿಂತಲೂ 77 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ.






